ದುಬೈ: ಕೇಪ್ಟೌನ್ನಲ್ಲಿ ಈಚೆಗೆ ಭಾರತ ಮತ್ತು ದಕ್ಷಿಣ ಆಫ್ರಿಕಾದ ನಡುವಣ ‘ಅತಿ ಕಡಿಮೆ ಅವಧಿ’ ಟೆಸ್ಟ್ ಪಂದ್ಯ ನಡೆದ ನ್ಯೂಲ್ಯಾಂಡ್ಸ್ ಕ್ರೀಡಾಂಗಣದ ಪಿಚ್ ‘ಅತೃಪ್ತಿಕರ’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ರೇಟಿಂಗ್ ನೀಡಿದೆ. ಈ ಕ್ರೀಡಾಂಗಣಕ್ಕೆ ಒಂದು ಡಿಮೆರಿಟ್ ಅಂಕವನ್ನು ನೀಡಲಾಗಿದೆ.

ಕೇವಲ ಒಂದೂವರೆ ದಿನದಲ್ಲಿ ನಡೆದ ಆ ಪಂದ್ಯದಲ್ಲಿ ಭಾರತ ತಂಡವು ಜಯಿಸಿತ್ತು. ಎರಡು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತ್ತು.

‘ನ್ಯೂಲ್ಯಾಂಡ್ಸ್ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ಬಹಳ ಕಷ್ಟದಾಯಕವಾಗಿತ್ತು. ಚೆಂಡು ನಿರೀಕ್ಷೆಗಿಂತಲೂ ಹೆಚ್ಚು ಚುರುಕಾಗಿ ಬೌನ್ಸ್ ಆಗುತ್ತಿತ್ತು. ಕೆಲವೊಮ್ಮೆ ಅಪಾಯಕಾರಿ ಮಟ್ಟದಲ್ಲಿಯೂ ಪುಟಿಯುತ್ತಿತ್ತು. ಇದರಿಂದಾಗಿ ಹೊಡೆತಗಳನ್ನು ಪ್ರಯೋಗಿಸುವುದು ಬ್ಯಾಟರ್ಗಳಿಗೆ ಕಷ್ಟವಾಗಿತ್ತು‘ ಎಂದು ಪಂದ್ಯ ರೆಫರಿ ಕ್ರಿಸ್ ಬ್ರಾಡ್ ಅವರು ಐಸಿಸಿಗೆ ವರದಿ ಸಲ್ಲಿಸಿದ್ದರು.

‘ಕೆಲವು ಬ್ಯಾಟರ್ಗಳ ಕೈಗವಸುಗಳಿಗೆ ಚೆಂಡು ಬಡಿಯಿತು. ಇನ್ನೂ ಕೆಲವು ಬ್ಯಾಟರ್ಗಳು ಅನಿರೀಕ್ಷಿತ ಹಾಗೂ ವಿಚಿತ್ರ ಬೌನ್ಸರ್ಗಳಿಗೆ ಔಟಾದರು’ ಎಂದೂ ಬ್ರಾಡ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಯಾವುದೇ ಕ್ರೀಡಾಂಗಣಗಣದ ಪಿಚ್ ಅತೃಪ್ತಿಕರವಾಗಿದ್ದರೆ ಡಿಮೆರಿಟ್ ಅಂಕಗಳನ್ನು ನೀಡಲಾಗುತ್ತದೆ. ಒಂದೊಮ್ಮೆ ಆರು ಅಂಕಗಳನ್ನು ತೆಗೆದುಕೊಂಡ ಕ್ರೀಡಾಂಗಣಗಳಲ್ಲಿ 12 ತಿಂಗಳು ಪಂದ್ಯಗಳನ್ನು ಆಯೋಜಿಸುವುದನ್ನು ನಿರ್ಬಂಧಿಸಲಾಗುತ್ತದೆ.12 ಡಿಮೆರಿಟ್ ಅಂಕಗಳಾದರೆ 24 ತಿಂಗಳು ನಿರ್ಬಂಧಿಸಲಾಗುತ್ತದೆ.

ನ್ಯೂಲ್ಯಾಂಡ್ಸ್ ಕ್ರೀಡಾಂಗಣದ ಪಿಚ್ ಬಗ್ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಶುಕ್ರಿ ಕಾನ್ರಾಡ್ ಅವರೂ ಅಸಮಾಧಾನ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.