ಹ್ಯಾಮಿಲ್ಟನ್: ಇಲ್ಲಿನ ಸೆಡನ್ ಪಾರ್ಕ್ ಮೈದಾನದಲ್ಲಿ ನಡೆದಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ ಭಾರತ ತಂಡದ ಶ್ರೇಯಸ್ ಅಯ್ಯರ್ ಹಾಗೂ ನ್ಯೂಜಿಲೆಂಡ್ನ ರಾಸ್ ಟೇಲರ್ ಜೊತೆಯಾಗಿ ದಾಖಲೆ ಪುಟ ಸೇರಿದರು.ಒಂದೇ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ ಬ್ಯಾಟ್ಸ್ಮನ್ಗಳಿಬ್ಬರೂ ಶತಕ ಸಿಡಿಸಿರುವುದುಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದು ಮೂರನೇ ಬಾರಿಗೆ.

2007ರಲ್ಲಿ ಹರಾರೆಯಲ್ಲಿ (ಜಿಂಬಾಬ್ವೆ)ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್(107) ಹಾಗೂ ಜಿಂಬಾಬ್ವೆಯ ತಟೆಂದ ತೈಬು(107)ಶತಕ ಸಿಡಿಸಿದ್ದರು. 2017ರಲ್ಲಿ ಕಟಕ್ನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಯುವರಾಜ್ ಸಿಂಗ್ (150) ಮತ್ತು ಇಂಗ್ಲೆಂಡ್ನ ಇಯಾನ್ ಮಾರ್ಗನ್ (102) ಶತಕ ಗಳಿಸಿದ್ದರು.ಇದೀಗ ಅಯ್ಯರ್ ಹಾಗೂ ಟೇಲರ್ ಸೇರಿದ ಮೂರನೇ ಜೋಡಿಯಾಗಿಆ ಪಟ್ಟಿಗೆ ಸೇರಿದರು.

ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಇಂದು ನ್ಯೂಜಿಲೆಂಡ್ 4 ವಿಕೆಟ್ ಜಯ ಸಾಧಿಸಿತು.ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 347 ರನ್ ಕಲೆ ಹಾಕಿತ್ತು. ಈ ಮೊತ್ತ ಬೆನ್ನತ್ತಿದ ಕಿವೀಸ್ ಪಡೆ 48.1ನೇ ಓವರ್ನಲ್ಲಿ ಗುರಿ ಮುಟ್ಟಿತು.

ಭಾರತ ಪರ ಶ್ರೇಯಸ್ ಅಯ್ಯರ್ 103 ಹಾಗೂ ನ್ಯೂಜಿಲೆಂಡ್ ಪರ ರಾಸ್ ಟೇಲರ್ 107 ರನ್ ಬಾರಿಸಿ ಗಮನ ಸೆಳೆದರು. ಶ್ರೇಯಸ್ಗೆ ಇದು ಚೊಚ್ಚಲ ಶತಕವಾದರೆ, ಟೇಲರ್ ಅವರಿಗಿದು 21ನೇ ಶತಕ.

ಎರಡನೇ ಪಂದ್ಯ ಫೆಬ್ರುವರಿ 8ರಂದು ಆಕ್ಲೆಂಡ್ನಲ್ಲಿ ಮತ್ತು ಮೂರನೇ ಪಂದ್ಯ ಮೌಂಟ್ ಮಾಂಗನೂಯಿಯಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.