ಜೋಹಾನ್ಸ್ಬರ್ಗ್: ಇಲ್ಲಿನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ ತಂಡವು ದ್ವಿತೀಯ ಇನ್ನಿಂಗ್ಸ್ನಲ್ಲಿ 60.1 ಓವರ್ಗಳಲ್ಲಿ 266 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿದೆ.

ಈ ಮೂಲಕ ದಕ್ಷಿಣ ಆಫ್ರಿಕಾದ ಗೆಲುವಿಗೆ 240 ರನ್ಗಳ ಸವಾಲಿನ ಗುರಿ ಒಡ್ಡಿದೆ.

ಮೂರನೇ ದಿನದಾಟದಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶಿಸಿದ ಚೇತೇಶ್ವರ ಪೂಜಾರ (53), ಅಂಜಿಕ್ಯ ರಹಾನೆ (58) ಹಾಗೂ ಹನುಮ ವಿಹಾರಿ (40*) ಟೀಮ್ ಇಂಡಿಯಾಗೆ ನೆರವಾದರು. ಶಾರ್ದೂಲ್ ಠಾಕೂರ್ ಸಹ 28 ರನ್ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ಸತತ ವೈಫಲ್ಯಗಳನ್ನು ಅನುಭವಿಸಿರುವ ಪೂಜಾರ ಹಾಗೂ ರಹಾನೆ ಆಕರ್ಷಕ ಅರ್ಧಶತಕಗಳನ್ನು ಗಳಿಸುವ ಮೂಲಕ ನೆರವಾದರು. ಈ ಮೂಲಕ ಟೀಕಾಕಾರರಿಗೆ ತಮ್ಮ ಬ್ಯಾಟ್ ಮೂಲಕವೇ ಉತ್ತರಿಸಿದರು.

ಮೂರನೇ ವಿಕೆಟ್ಗೆ ಶತಕದ (111) ಜೊತೆಯಾಟ ಕಟ್ಟಿದ ಈ ಜೋಡಿಯು ತಂಡಕ್ಕೆ ಆಸರೆಯಾದರು. ಆದರೆ ಅರ್ಧಶತಕಗಳ ಬೆನ್ನಲ್ಲೇ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.

ಪೂಜಾರ 53 ಹಾಗೂ ರಹಾನೆ 58 ರನ್ ಗಳಿಸಿ ಔಟಾದರು. ಈ ಜೊತೆಯಾಟವನ್ನು ಮುರಿದ ಕಗಿಸೊ ರಬಾಡ ಮಗದೊಮ್ಮೆ ಮಾರಕವಾಗಿ ಕಾಡಿದರು. ಇದರಿಂದಾಗಿ 184 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್ಗಳನ್ನು ಕಳೆದುಕೊಂಡಿತು. ರಿಷಭ್ ಪಂತ್ (0) ಹಾಗೂ ರವಿಚಂದ್ರನ್ ಅಶ್ವಿನ್ (16) ವೈಫಲ್ಯ ಅನುಭವಿಸಿದರು.

ಕೊನೆಯ ಹಂತದಲ್ಲಿ ಹನುಮ ವಿಹಾರಿ 40 ರನ್ ಗಳಿಸಿ ಔಟಾಗದೆ ಉಳಿದರು. ಶಾರ್ದೂಲ್ ಠಾಕೂರ್ 28 ರನ್ಗಳ ಕೊಡುಗೆ ನೀಡಿದರು. ಇತರೆ ರೂಪದಲ್ಲಿ 33 ರನ್ ಹರಿದು ಬಂದವು. ಇನ್ನುಳಿದಂತೆ ಮೊಹಮ್ಮದ್ ಶಮಿ (0) ಹಾಗೂ ಜಸ್ಪ್ರೀತ್ ಬೂಮ್ರಾ (7) ರನ್ ಗಳಿಸಿದರು.

ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ, ಲುಂಗಿ ಗಿಡಿ ಹಾಗೂ ಮಾರ್ಕೊ ಜ್ಯಾನ್ಸನ್ ತಲಾ ಮೂರು ವಿಕೆಟ್ಗಳನ್ನು ಹಂಚಿಕೊಂಡರು.

ಈ ಮೊದಲು ಭಾರತದ 202 ರನ್ಗಳಿಗೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಪ್ರಥಮ ಇನ್ನಿಂಗ್ಸ್ನಲ್ಲಿ 229 ರನ್ಗಳಿಗೆ ಆಲೌಟ್ ಆಗಿತ್ತು. ಭಾರತದ ಪರ ಶಾರ್ದೂಲ್ ಠಾಕೂರ್ 61 ರನ್ ತೆತ್ತು ಏಳು ವಿಕೆಟ್ ಕಬಳಿಸಿ ಮಿಂಚಿದರು. ಆದರೂ ಮೊದಲ ಇನ್ನಿಂಗ್ಸ್ನಲ್ಲಿ 27 ರನ್ ಅಂತರದ ಹಿನ್ನಡೆಗೊಳಗಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.