ನವದೆಹಲಿ: ‘ಬಲಿಷ್ಠ ತಂಡಗಳ ವಿರುದ್ಧ ಸೆಣಸುವುದು ನಮಗೆ ಇಷ್ಟ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಜ್ಜಾಗಿದ್ದೇವೆ’ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಹೇಳಿದರು.

ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ತಂಡ ಶನಿವಾರ ಹೊರಡಲಿದ್ದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಐರ್ಲೆಂಡ್ನಲ್ಲಿ ಎರಡು ಪಂದ್ಯಗಳ ಟ್ವೆಂಟಿ–20 ಸರಣಿ ಮತ್ತು ಇಂಗ್ಲೆಂಡ್ನಲ್ಲಿ ತಲಾ ಮೂರು ಟ್ವೆಂಟಿ–20 ಮತ್ತು ಏಕದಿನ ಪಂದ್ಯಗಳು, ಐದು ಟೆಸ್ಟ್ ಪಂದ್ಯಗಳನ್ನು ಭಾರತ ಆಡಲಿದೆ.

‘ಯಾವುದೇ ಸರಣಿಯಲ್ಲಿ ಆಡುವಾಗ ಎದುರಾಳಿ ತಂಡ ಯಾವುದು ಎಂಬುದರ ಬಗ್ಗೆ ಯೋಚನೆ ಮಾಡುವುದಿಲ್ಲ. ಭಾರತಕ್ಕೆ ಜಯ ಗಳಿಸಿಕೊಡಬೇಕೆಂಬುದು ಮಾತ್ರ ನನ್ನ ಮನಸ್ಸಿನಲ್ಲಿರುತ್ತದೆ’ ಎಂದು ಕೊಹ್ಲಿ ಹೇಳಿದರೆ, ‘ನಮ್ಮ ತಂಡ ಎದುರಾಳಿಯ ವಿರುದ್ಧ ಆಡುವುದಿಲ್ಲ, ಪಿಚ್ ವಿರುದ್ಧ ಆಡಲಿದೆ’ ಎಂದು ರವಿಶಾಸ್ತ್ರಿ ಮಾರ್ಮಿಕವಾಗಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.