ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿರುವ ಭಾರತ ತಂಡ 2–1ರ ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.

ದಕ್ಷಿಣ ಆಫ್ರಿಕಾ ನೀಡಿದ್ದ 100 ರನ್‌ಗಳ ಸಾಧಾರಣ ಗುರಿಯನ್ನು ಭಾರತ 19.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ತಲುಪಿತು.

ಶುಭಮನ್ ಗಿಲ್ 49 ಮತ್ತು ಶ್ರೇಯಸ್ ಅಯ್ಯರ್ ಔಟಾಗದೇ 28 ರನ್ ಬಾರಿಸಿದರು. ಉಳಿದಂತೆ ಇಶಾನ್ ಕಿಶನ್ 10 ರನ್ ಗಳಿಸಿದರು.

ಇದಕ್ಕೂ ಮುನ್ನ, ಟಾಸ್ ಸೋತುಬ್ಯಾಟಿಂಗ್ ಆಹ್ವಾನ ಪಡೆದಿದ್ದ ದಕ್ಷಿಣ ಆಫ್ರಿಕಾ ತಂಡ 99 ರನ್‌ಗಳಿಗೆ ಆಲೌಟ್ ಆಗಿತ್ತು.

ಮಲಾನ್ 15, ಕ್ಲಾಸಿನ್ 34 ಮತ್ತು ಜೇಸನ್ 14 ರನ್ ಗಳಿಸಿದ್ದು ಬಿಟ್ಟರೆ, ದಕ್ಷಿಣ ಆಫ್ರಿಕಾದ ಬೇರೆ ಯಾವ ಬ್ಯಾಟರ್ ಸಹ ಒಂದಂಕಿ ದಾಟಲಿಲ್ಲ.

4.1 ಓವರ್‌ಗಳಲ್ಲಿ 18 ರನ್ ನೀಡಿ 4 ವಿಕೆಟ್ ಕಬಳಿಸಿದ ಕುಲದೀಪ್ ಯಾದವ್ ಯಶಸ್ವಿ ಬೌಲರ್ ಎನಿಸಿದರು. ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್ ಮತ್ತು ಶಹಬಾಜ್ ಅಹ್ಮದ್ ತಲಾ ಎರಡು ವಿಕೆಟ್ ಉರುಳಿಸಿ ಗಮನ ಸೆಳೆದರು.

ಚುರುಕಿನ ಬೌಲಿಂಗ್: ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಧವನ್ ಅವರ ನಿರ್ಧಾರವನ್ನು ಬೌಲರ್‌ಗಳು ಸಮರ್ಥಿಸಿಕೊಂಡರು. ಮೊಹಮ್ಮದ್ ಸಿರಾಜ್ ಮತ್ತು ವಾಷಿಂಗ್ಟನ್ ಸುಂದರ್ ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದರೆ, ಕುಲದೀಪ್ ಕೊನೆಯ ಕ್ರಮಾಂಕದ ಬ್ಯಾಟರ್‌ಗಳನ್ನು ಕಟ್ಟಿಹಾಕಿದರು.

ಕ್ವಿಂಟನ್ ಡಿಕಾಕ್ (6), ರೀಜಾ ಹೆಂಡ್ರಿಕ್ಸ್ (3) ಮತ್ತು ಏಡನ್ ಮರ್ಕರಂ (9) ಎರಡಂಕಿಯ ಮೊತ್ತ ಗಳಿಸಲಿಲ್ಲ. ಇವರು ಕ್ರಮವಾಗಿ ವಾಷಿಂಗ್ಟನ್, ಸಿರಾಜ್ ಮತ್ತು ಶಹಬಾಜ್‌ಗೆ ವಿಕೆಟ್ ಒಪ್ಪಿಸಿದರು. ಉತ್ತಮ ಆರಂಭ ಪಡೆದಿದ್ದ ಜೇನ್ಮನ್ ಮಲಾನ್ (15) ಅವರನ್ನು ಸಿರಾಜ್ ಪೆವಿಲಿಯನ್‌ಗೆ ಅಟ್ಟಿದರು. ನಾಲ್ಕನೇ ವಿಕೆಟ್ ಬಿದ್ದಾಗ ತಂಡದ ಸ್ಕೋರ್ 43 ಆಗಿತ್ತು.

ಹೆನ್ರಿಕ್ ಕ್ಲಾಸನ್ (34 ರನ್, 42 ಎ., 4X4) ಪ್ರತಿರೋಧ ಒಡ್ಡಿದರೂ, ಅವರಿಗೆ ಇತರ ಬ್ಯಾಟರ್‌ಗಳಿಂದ ಬೆಂಬಲ ಸಿಗಲಿಲ್ಲ. ನಾಯಕ ಡೇವಿಡ್ ಮಿಲ್ಲರ್ (7) ಅವರು ವಾಷಿಂಗ್ಟನ್ ಎಸೆತದಲ್ಲಿ ಬೌಲ್ಡ್ ಆದರು. 20ನೇ ಓವರ್‌ನಲ್ಲಿ ದಾಳಿಗಿಳಿದ ಕುಲದೀಪ್ ಕೂಡಾ ವಿಕೆಟ್ ಬೇಟೆ ಶುರು ಮಾಡಿದ್ದರಿಂದ ದಕ್ಷಿಣ ಆಫ್ರಿಕಾ ಮರುಹೋರಾಟದ ಆಸೆ ಕೈಬಿಟ್ಟಿತು.

ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ 27.1 ಓವರ್‌ಗಳಲ್ಲಿ 99 (ಜೇನ್ಮನ್ ಮಲಾನ್ 15, ಹೆನ್ರಿಕ್ ಕ್ಲಾಸನ್ 34, ಮಾರ್ಕೊ ಜಾನ್ಸೆನ್ 14, ಕುಲದೀಪ್ ಯಾದವ್ 18ಕ್ಕೆ 4, ವಾಷಿಂಗ್ಟನ್ ಸುಂದರ್ 15ಕ್ಕೆ 2, ಮೊಹಮ್ಮದ್ ಸಿರಾಜ್ 17ಕ್ಕೆ 2, ಶಹಬಾಜ್ ಅಹ್ಮದ್ 32ಕ್ಕೆ 2)

ಭಾರತ 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 105 (ಶಿಖರ್ ಧವನ್ 8, ಶುಭಮನ್ ಗಿಲ್ 49, ಇಶಾನ್ ಕಿಶನ್ 10, ಶ್ರೇಯಸ್ ಅಯ್ಯರ್ ಔಟಾಗದೆ 28, ಸಂಜು ಸ್ಯಾಮ್ಸನ್ ಔಟಾಗದೆ 2, ಲುಂಗಿ ಗಿಡಿ 21ಕ್ಕೆ 1, ಬೋರ್ನ್ ಫಾರ್ಟೂನ್ 20ಕ್ಕೆ 1) ಫಲಿತಾಂಶ: ಭಾರತಕ್ಕೆ 7 ವಿಕೆಟ್ ಗೆಲುವು; 3 ಪಂದ್ಯಗಳ ಸರಣಿಯಲ್ಲಿ 2–1 ಜಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.