ಕೋಲ್ಕತ್ತ (ಪಿಟಿಐ): ಕನ್ನಡಿಗ ರಾಬಿನ್ ಉತ್ತಪ್ಪ ಮತ್ತು ಜಮೈಕಾದ ದೈತ್ಯ ಆ್ಯಂಡ್ರೆ ರಸೆಲ್ ಈಡನ್ ಗಾರ್ಡನ್ನಲ್ಲಿ ಬುಧವಾರ ರಾತ್ರಿ ಬಿರುಗಾಳಿ ಎಬ್ಬಿಸಿದರು.

ಅವರ ಸಿಡಿಲಬ್ಬರದ ಬ್ಯಾಟಿಂಗ್ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಬೌಲರ್ಗಳು ದೂಳೀಪಟವಾದರು. ಇದರಿಂದಾಗಿ ಆತಿಥೇಯ ಕೋಲ್ಕತ್ತ ನೈಟ್ ರೈಡರ್ಸ್ ತಂಡವು 28ರನ್ಗಳ ಜಯಭೇರಿ ಮೊಳಗಿಸಿತು.

ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ಗಳಲ್ಲಿ 4 ವಿಕೆಟ್ಗೆ 218 ರನ್ಗಳ ಬೃಹತ್ ಮೊತ್ತ ಪೇರಿಸಿತು. ಕಿಂಗ್ಸ್ ಇಲೆವನ್ 4 ವಿಕೆಟ್ಗೆ 190ರನ್ ಗಳಿಸಿ ಹೋರಾಟ ಮುಗಿಸಿತು.

ಕೆಕೆಆರ್ ತಂಡದ ಆರಂಭ ಚೆನ್ನಾಗಿರಲಿಲ್ಲ. ಕ್ರಿಸ್ ಲಿನ್ ಮೂರನೇ ಓವರ್ ನಲ್ಲಿ ಮೊಹಮ್ಮದ್ ಶಮಿಗೆ ವಿಕೆಟ್ ನೀಡಿದರು. ಸುನಿಲ್ ನಾರಾಯಣ್ 24 ರನ್ ಗಳಿಸಿ ಔಟಾದರು. ಆಗ ತಂಡದ ಮೊತ್ತವು 3.3 ಓವರ್ಗಳಲ್ಲಿ ಎರಡು ವಿಕೆಟ್ಗಳಿಗೆ 33 ರನ್ ಆಗಿತ್ತು.

ಈ ಹಂತದಲ್ಲಿ ಜೊತೆಗೂಡಿದ ರಾಬಿನ್ ಉತ್ತಪ್ಪ (67; 50ಎಸೆತ, 6 ಬೌಂಡರಿ, 2ಸಿಕ್ಸರ್) ಮತ್ತು ನಿತೀಶ್ ರಾಣಾ (63; 34ಎ, 2ಬೌಂ 7ಸಿ) ತಂಡಕ್ಕೆ ಗೌರವಯುತ ಮೊತ್ತ ಪೇರಿಸುವ ದಾರಿ ತೋರಿಸಿದರು. ರಾಣಾ ಬೀಸಾಟಕ್ಕೆ ಸ್ಥಳೀಯ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಗ್ಯಾಲರಿಯಲ್ಲಿದ್ದ ಕೆಕೆಆರ್ ಸಹ ಮಾಲೀಕ ಶಾರುಖ್ ಖಾನ್ ಸಂತಸದಿಂದ ಬೀಗಿದರು. ರಾಬಿನ್ ಮತ್ತು ರಾಣಾ ಮೂರನೇ ವಿಕೆಟ್ಗೆ 110 ರನ್ ಪೇರಿಸಿದರು.

15ನೇ ಓವರ್ನಲ್ಲಿ ವರುಣ್ ಚಕ್ರವರ್ತಿ ಎಸೆತವನ್ನು ಸಿಕ್ಸರ್ಗೆ ಎತ್ತಲು ಯತ್ನಿಸಿದ ರಾಣಾ ಅವರು ಮಯಂಕ್ ಅಗರವಾಲ್ಗೆ ಕ್ಯಾಚಿತ್ತರು.

ಆದರೆ, ಪಂಜಾಬ್ ತಂಡಕ್ಕೆ ಸಂಕಷ್ಟ ಶುರುವಾಗಿದ್ದು ಇಲ್ಲಿಂದಲೇ. ವಿಂಡೀಸ್ ದೈತ್ಯ ಆ್ಯಂಡ್ರೆ ರಸೆಲ್ ಕ್ರೀಸ್ಗೆ ಕಾಲಿಟ್ಟ ಕ್ಷಣದಿಂದಲೇ ಅಬ್ಬರಿಸಿದರು. ಅದರಲ್ಲೂ ಮೊಹಮ್ಮದ್ ಶಮಿಯ ಯಾರ್ಕರ್ ಲೆಂಗ್ತ್, ಇನ್ಸ್ವಿಂಗ್, ಫುಲ್ ಟಾಸ್ ಎಸೆತಗಳನ್ನು ಪ್ರೇಕ್ಷಕರ ಗ್ಯಾಲರಿಗೆ ಅಟ್ಟಿದರು. 19ನೇ ಓವರ್ನಲ್ಲಿ ಅವರು ಸತತ ಮೂರು ಸಿಕ್ಸರ್, ಒಂದು ಬೌಂಡರಿ ಹೊಡೆದರು. ಕೇವಲ 17 ಎಸೆತಗಳಲ್ಲಿ 48 ರನ್ ಗಳಿಸಿದರು. ಒಟ್ಟು ಐದು ಸಿಕ್ಸರ್ ಮತ್ತು ಮೂರು ಬೌಂಡರಿಗಳು ಅದರಲ್ಲಿದ್ದವು.

ನಾಲ್ಕನೇ ವಿಕೆಟ್ಗೆ ಅವರು ರಾಬಿನ್ ಜೊತೆಗೆ 57 ರನ್ ಸೇರಿಸಿದರು. ಇದರಿಂದಾಗಿ ತಂಡವು ಇನ್ನೂರರ ಗಡಿ ದಾಟಿತು. ರಾಬಿನ್ ತಮ್ಮ ಆಟವನ್ನು ನಿಧಾನಗೊಳಿಸಿದರು. ಆ್ಯಂಡ್ರೆ ಕೊನೆಯ ಓವರ್ನಲ್ಲಿ ಆ್ಯಂಡ್ರೂ ಟೈ ಬೌಲಿಂಗ್ನಲ್ಲಿ ಔಟಾದರು.

ಗುರಿ ಬೆನ್ನಟ್ಟಿದ ಪಂಜಾಬ್ ತಂಡ ಕೆ.ಎಲ್.ರಾಹುಲ್ (1) ಮತ್ತು ಕ್ರಿಸ್ ಗೇಲ್ (20; 13ಎ, 2ಬೌಂ, 2ಸಿ) ವಿಕೆಟ್ ಬೇಗನೆ ಕಳೆದುಕೊಂಡಿತು.

ಮಯಂಕ್ ಅಗರವಾಲ್ (58; 34ಎ, 6ಬೌಂ, 1ಸಿ) ಮತ್ತು ಡೇವಿಡ್ ಮಿಲ್ಲರ್ (ಔಟಾಗದೆ 59; 40ಎ, 5ಬೌಂ, 3ಸಿ) ದಿಟ್ಟ ಆಟ ಆಡಿದರೂ ತಂಡ ಸೋಲಿನಿಂದ ಪಾರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.