ಬೆಂಗಳೂರು: ಮೊಹಮ್ಮದ್ ತಾಹ ಅರ್ಧಶತಕದ ಬಲದಿಂದ ಹುಬ್ಬಳ್ಳಿ ಟೈಗರ್ಸ್ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ತಂಡವು 6 ವಿಕೆಟ್‌ಗಳಿಂದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಜಯಿಸಿತು. ಮಯಂಕ್ ಅಗರವಾಲ್ ನಾಯಕತ್ವದ ಬೆಂಗಳೂರು ತಂಡಕ್ಕೆ ಇದು ಸತತ ಏಳನೇ ಸೋಲು. ಇಲ್ಲಿಯವರೆಗೂ ಟೂರ್ನಿಯಲ್ಲಿ ಗೆಲುವಿನ ಖಾತೆಯನ್ನೇ ತಂಡವು ತೆರೆದಿಲ್ಲ.

ಟಾಸ್ ಗೆದ್ದ ಬೆಂಗಳೂರು ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ಮಯಂಕ್ (68; 38ಎ, 4X3, 6X6) ಹಾಗೂ ನಿಶ್ಚಲ್ (54; 42ಎ, 4X5) ಅವರಿಬ್ಬರ ಅರ್ಧಶತಕಗಳ ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 188 ರನ್ ಗಳಿಸಿತು.

ಈ ಉತ್ತಮ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಬೆಂಗಳೂರು ತಂಡದ ಬೌಲರ್‌ಗಳು ವಿಫಲರಾದರು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಲವನೀತ್ ಸಿಸೊಡಿಯಾ (20; 9ಎ) ಅವರನ್ನು ಶುಭಾಂಗ್ ಹೆಗ್ಡೆ ಔಟ್ ಮಾಡಿದರು. ಆದರೆ ಮೊಹಮ್ಮದ್ ತಾಹ (66; 35ಎ) ಮತ್ತು ಶ್ರೀಜಿತ್ (45; 30ಎ) ಅವರ ಅಮೋಘ ಬ್ಯಾಟಿಂಗ್ ಬಲದಿಂದ ತಂಡವು 18.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 190 ರನ್ ಗಳಿಸಿ ಗೆದ್ದಿತು.

ಸಂಕ್ಷಿಪ್ತ ಸ್ಕೋರು: ಬೆಂಗಳೂರು ಬ್ಲಾಸ್ಟರ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 188 (ಮಯಂಕ್ ಅಗರವಾಲ್ 68, ಡಿ. ನಿಶ್ಚಲ್ 54, ಶುಭಾಂಗ್ ಹೆಗಡೆ 29, ವಿದ್ವತ್ ಕಾವೇರಪ್ಪ 29ಕ್ಕೆ2, ಕೆ.ಸಿ. ಕಾರ್ಯಪ್ಪ 31ಕ್ಕೆ3) ಹುಬ್ಬಳ್ಳಿ ಟೈಗರ್ಸ್: 18.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 190 (ಲವನಿತ್ ಸಿಸೊಡಿಯಾ 20, ಮೊಹಮ್ಮದ್ ತಾಹ 66, ಕೃಷ್ಣನ್ ಶ್ರೀಜಿತ್ 45, ಮನೀಷ್ ಪಾಂಡೆ ಔಟಾಗದೆ 35, ಸರ್ಫರಾಜ್ ಅಶ್ರಫ್ 34ಕ್ಕೆ2) ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ 6 ವಿಕೆಟ್‌ಗಳ ಜಯ.

ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 162 (ಕರುಣ್ ನಾಯರ್ 46, ಕೆ.ಎಸ್. ಲಂಕೇಶ್ 25, ಮನೋಜ್ ಬಾಂಢಗೆ 20, ಜೆ. ಸುಚಿತ್ ಔಟಾಗದೆ 18, ವಿ. ಕೌಶಿಕ್ 27ಕ್ಕೆ2, ಕ್ರಾಂತಿಕುಮಾರ್ 40ಕ್ಕೆ2) ಶಿವಮೊಗ್ಗ ಲಯನ್ಸ್: 19.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 163 (ನಿಹಾಲ್ ಉಲ್ಲಾಳ 45, ಅಭಿನವ್ ಮನೋಹರ್ 27, ಕ್ರಾಂತಿಕುಮಾರ್ ಔಟಾಗದೆ 20, ಮೊನಿಷ್ ರೆಡ್ಡಿ 28ಕ್ಕೆ2) ಫಲಿತಾಂಶ: ಶಿವಮೊಗ್ಗ ಲಯನ್ಸ್‌ಗೆ 5 ವಿಕೆಟ್‌ಗಳ ಜಯ.

ಇಂದಿನ ಪಂದ್ಯಗಳು

ಹುಬ್ಬಳ್ಳಿ ಟೈಗರ್ಸ್–ಗುಲ್ಬರ್ಗ ಮಿಸ್ಟಿಕ್ಸ್ (ಮಧ್ಯಾಹ್ನ 1ರಿಂದ)

ಮಂಗಳೂರು ಡ್ರ್ಯಾಗನ್ಸ್–ಮೈಸೂರು ವಾರಿಯರ್ಸ್ (ಸಂಜೆ 5.30ರಿಂದ)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಫ್ಯಾನ್‌ಕೋಡ್.

ಶಿವಮೊಗ್ಗ ಲಯನ್ಸ್‌ಗೆ ಜಯ

ನಿಹಾಲ್ ಉಲ್ಲಾಳ (45; 39ಎ) ಅವರ ಉತ್ತಮ ಬ್ಯಾಟಿಂಗ್ ಬಲದಿಂದ ಶಿವಮೊಗ್ಗ ಲಯನ್ಸ್ ತಂಡವು 5 ವಿಕೆಟ್‌ಗಳಿಂದ ಮೈಸೂರು ವಾರಿಯರ್ಸ್ ಎದುರು ಜಯಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವಿ. ಕೌಶಿಕ್ (27ಕ್ಕೆ2) ಮತ್ತು ಕ್ರಾಂತಿ ಕುಮಾರ್ (40ಕ್ಕೆ2)ಅವರ ಅಮೋಘ ಬೌಲಿಂಗ್ ಮುಂದೆ ಮೈಸೂರು ತಂಡಕ್ಕೆ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 162 ರನ್ ಗಳಿಸಲು ಸಾಧ್ಯವಾಯಿತು. ತಂಡದ ನಾಯಕ ಕರುಣ್ ನಾಯರ್ (46; 33ಎ 4X3 6X2) ಮತ್ತು ಲಂಕೇಶ್ (25; 19ಎ) ತಂಡಕ್ಕೆ ಕಾಣಿಕೆ ನೀಡಿದರು. ಗುರಿ ಬೆನ್ನಟ್ಟಿದ ಶಿವಮೊಗ್ಗ ತಂಡವು 19.4 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 163 ರನ್ ಗಳಿಸಿ ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.