ಸಿಡ್ನಿ: ಕ್ರಿಕೆಟ್ ಪಂದ್ಯಾವಳಿ ವೇಳೆ ವೀಕ್ಷಕರು ಕ್ರೇಜಿಯಾಗಿ ವರ್ತಿಸುವುದು ಹೊಸದೇನಲ್ಲ. ಸಿಡ್ನಿಯಲ್ಲಿ ನಡೆದ ಭಾರತ–ನೆದರ್ಲೆಂಡ್ ನಡುವಿನ ಟಿ–20 ವಿಶ್ವಕಪ್ ಪಂದ್ಯದ ವೇಳೆಯೂ ಅಂಥದ್ದೇ ಘಟನೆ ನಡೆದಿದೆ.

ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಯೊಬ್ಬ ಸ್ಟ್ಯಾಂಡ್ನಲ್ಲೇ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಯುವತಿ ಆತನ ಪ್ರೇಮ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ್ದಾಳೆ. ಇದೇ ಸಂದರ್ಭ ಯುವಕ, ಯುವತಿಗೆ ಉಂಗುರ ತೊಡಿಸಿದ್ದಾನೆ.

ಈ ವಿಡಿಯೊವನ್ನು ಐಸಿಸಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ವಿಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ಹಿಂದೆ ಐಪಿಎಲ್ ಪಂದ್ಯದ ವೇಳೆಯೂ ಇಂಥದ್ದೇ ಘಟನೆ ನಡೆದಿತ್ತು.

ನೆದರ್ಲೆಂಡ್ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ 7ನೇ ಓವರ್ ಸಂದರ್ಭ ಈ ಪ್ರಸಂಗ ನಡೆದಿದೆ. ಈ ವೇಳೆ ನೆದರ್ಲೆಂಡ್ 2 ವಿಕೆಟ್ ಕಳೆದುಕೊಂಡು 28 ರನ್ ಗಳಿಸಿತ್ತು. ಭಾರತ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.

ಈ ಪಂದ್ಯವನ್ನು ಭಾರತ ತಂಡ 56 ರನ್ಗಳಿಂದ ಗೆದ್ದುಕೊಂಡಿತು. ಭಾರತ ನೀಡಿದ್ದ 180 ರನ್ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ನಿಗದಿತ ಓವರ್ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 123ರನ್ ಗಳಿಸಲಷ್ಟೇ ಶಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.