ನವದೆಹಲಿ: ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ತಮ್ಮ ಹಿಮ್ಮಡಿಯ ಗಾಯದ ಚಿಕಿತ್ಸೆಗಾಗಿ ಸಲಹೆ ಪಡೆಯಲು ಮುಂಬೈನ ಪರಿಣತ ಕ್ರೀಡಾ ವೈದ್ಯರನ್ನು ಭೇಟಿಯಾಗಲಿದ್ದಾರೆಂದು ತಿಳಿದುಬಂದಿದೆ.

ಇದೆ 26ರಿಂದ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೂ ಮುನ್ನ ಅವರು ಗಾಯದಿಂದ ಚೇತರಿಸಿಕೊಂಡು ಫಿಟ್ ಆಗುವ ನಿರೀಕ್ಷೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇದೆ. ಗುರುವಾರ ಪ್ರಕಟವಾದ ತಂಡದ ಪಟ್ಟಿಯಲ್ಲಿ ಶಮಿ ಹೆಸರಿದೆ. ಆದರೆ ಅದಕ್ಕೆ ಚುಕ್ಕೆಗುರುತು ಹಾಕಲಾಗಿದೆ. ಆ ಮೂಲಕ ಸಂಪೂರ್ಣ ಫಿಟ್ ಆದರೆ ಮಾತ್ರ ಪ್ರವಾಸಕ್ಕೆ ಪರಿಗಣಿಸಲಾಗುವುದು ಎಂದು ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ.

‘ಶಮಿಯ ಗಾಯದ ಕುರಿತು ಕೂಲಂಕಷ ತಪಾಸಣೆ ನಡೆಯಬೇಕಿದೆ. ಆಡುವಾಗ (ಆನ್‌ಫೀಲ್ಡ್) ಅಥವಾ ಫಿಟ್‌ನೆಸ್ ಕೊರತೆಯ ಗಾಯವೇ ಎಂಬುದು ಸ್ಟಷ್ಟವಾಗಬೇಕಿದೆ. ಅವರು ವೈದ್ಯರನ್ನು ಭೇಟಿಯಾದ ನಂತರ ಬೆಂಗಳೂರಿನ ಎನ್‌ಸಿಎ (ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ) ಗೂ ತೆರಳಲಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

ಈಚೆಗೆ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಶಮಿ ಆಡಿರಲಿಲ್ಲ. ಹಾರ್ದಿಕ್ ಪಾಂಡ್ಯ ಗಾಯಗೊಂಡು ಹೊರಬಿದ್ದ ಮೇಲೆ ಐದನೇ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಕ್ಕಿತ್ತು. ಅಮೋಘ ಬೌಲಿಂಗ್ ಮಾಡಿದ್ದ ಅವರು ಟೂರ್ನಿಯಲ್ಲಿ ಒಟ್ಟು 24 ವಿಕೆಟ್‌ಗಳನ್ನು ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.