ಬ್ಲೂಮ್‌ಫೌಂಟೇನ್: ನವದೀಪ್ ಸೈನಿ ಮತ್ತು ಇಶಾನ್ ಪೊರೆಲ್ ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಭಾರತ ‘ಎ’ ತಂಡ ದಕ್ಷಿಣ ಆಫ್ರಿಕಾ ’ಎ’ ತಂಡದ ಎದುರಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಹಿಡಿತ ಸಾಧಿಸಿದೆ.

ಮೊದಲ ದಿನದ ಆಟ ಮುಕ್ತಾಯಗೊಂಡಾಗ ಆತಿಥೇಯರು 85 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 233 ರನ್ ಕಲೆ ಹಾಕಿದೆ.

ಓಮೈಕ್ರಾನ್ ಆತಂಕದ ನಡುವೆಯೇ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಖಾತೆ ತೆರೆಯುವ ಮೊದಲೇ ನಾಯಕ ಪೀಟರ್ ಮಲಾನ್ ಅವರು ನಾಗಸ್ವಾಲ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ನಂತರ ಸರೆಲ್ ಎರ್ವಿ ಮತ್ತು ರೇನಾರ್ಡ್ 72 ರನ್‌ಗಳ ಜೊತೆಯಾಟ ಆಡಿದರು. ಸೈನಿ ಮತ್ತು ಪೊರೆಲ್ ಅವರ ದಾಳಿಯ ನಡುವೆಯೂ ಜುಬೇರ್ ಹಂಜ, ವಿಕೆಟ್ ಕೀಪರ್ ಸಿನೆತೆಂಬಾ ಖುರೇಶಿ, ಜಾರ್ಜ್ ಲಿಂಡೆ ಮತ್ತು ಮಾರ್ಕೊ ಜಾನ್ಸೆನ್ ದಿಟ್ಟ ಅಟವಾಡಿ ತಂಡದ ಮೊತ್ತ 200ರ ಗಡಿ ದಾಟಲು ನೆರವಾದರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ ‘ಎ’, ಮೊದಲ ಇನಿಂಗ್ಸ್: 85 ಓವರ್‌ಗಳಲ್ಲಿ 7ಕ್ಕೆ 233 (ಸರೆಲ್ ಎರ್ವಿ 38, ರೇನಾರ್ಡ್ ವ್ಯಾನ್ ತೊಂಡರ್ 34, ಜುಬೇರ್ ಹಂಜ 31, ಸಿನೆತೆಂಬ ಕ್ವೆಶಿಲೆ 32, ಜಾರ್ಜ್ ಲಿಂಡೆ 44, ಮಾರ್ಕೊ ಜಾನ್ಸೆನ್ 38; ನವದೀಪ್ ಸೈನಿ 54ಕ್ಕೆ2, ಅರ್ಜಾನ ನಾಗಸ್ವಾಲ 44ಕ್ಕೆ1, ಇಶಾನ್ ಪೊರೆಲ್ 26ಕ್ಕೆ2, ಸೌರಭ್ ಕುಮಾರ್ 64ಕ್ಕೆ 1, ಬಾಬಾ ಅಪರಾಜಿತ್ 34ಕ್ಕೆ1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.