ದುಬೈ: ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ಗಳ ಸರಣಿಯಲ್ಲಿ ಅಮೋಘ ಯಶಸ್ಸು ಗಳಿಸಿದ ಭಾರತದ ಯುವ ಬ್ಯಾಟಿಂಗ್ ತಾರೆ ಯಶಸ್ವಿ ಜೈಸ್ವಾಲ್ ಅವರು ಫೆಬ್ರುವರಿ ತಿಂಗಳ ‘ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

22 ವರ್ಷದ ಜೈಸ್ವಾಲ್ ಆ ಸರಣಿಯಲ್ಲಿ 712 ರನ್ ಕಲೆಹಾಕಿದ್ದರು. ಇತ್ತಂಡಗಳ ಪರ ಅತಿ ಹೆಚ್ಚಿನ ರನ್ ಗಳಿಸಿದ ಶ್ರೇಯಸ್ಸು ಅವರದಾಗಿತ್ತು. ಟೆಸ್ಟ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ (12) ಬಾರಿಸಿದ ದಾಖಲೆಯನ್ನು ಅವರು ರಾಜಕೋಟ್ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸುವ ಹಾದಿಯಲ್ಲಿ ಸರಿಗಟ್ಟಿದ್ದರು. ಸರಣಿಯಲ್ಲಿ ಎರಡು ದ್ವಿಶತಕ ಮತ್ತು ಮೂರು ಅರ್ಧ ಶತಕಗಳನ್ನು ಗಳಿಸಿದ್ದರು.

‘ಐಸಿಸಿ ಪ್ರಶಸ್ತಿ ಬಂದಿದ್ದರಿಂದ ಸಂತಸವಾಗಿದೆ. ಭವಿಷ್ಯದಲ್ಲಿ ಇನ್ನಷ್ಟು ಬರಬಹುದೆಂಬ ವಿಶ್ವಾಸವಿದೆ’ ಎಂದು ಜೈಸ್ವಾಲ್ ಅವರು ಪ್ರಶಸ್ತಿಗೆ ಆಯ್ಕೆಯಾದ ಸುದ್ದಿಗೆ ಪ್ರತಿಕ್ರಿಯಿಸಿದರು.

ಜೈಸ್ವಾಲ್ ಈ ಪ್ರಶಸ್ತಿ ಹಾದಿಯಲ್ಲಿ ನ್ಯೂಜಿಲೆಂಡ್‌ನ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ಮತ್ತು ಶ್ರೀಲಂಕಾದ ಆರಂಭ ಆಟಗಾರ ಪಥುಮ್ ನಿಸ್ಸಾಂಕ ಅವರನ್ನು ಹಿಮ್ಮೆಟ್ಟಿಸಿದರು.

ರಾಜಕೋಟ್‌ನಲ್ಲಿ ಅಜೇಯ 214 ಮತ್ತು ವಿಶಾಖಪಟ್ಟಣ ಟೆಸ್ಟ್‌ನಲ್ಲಿ 219 ರನ್ ಗಳಿಸಿದ್ದ ಅವರು ಬೆನ್ನುಬೆನ್ನಿಗೆ ದ್ವಿಶತಕ ಬಾರಿಸಿದ ಮೂರನೇ ಅತಿ ಕಿರಿಯ (22 ವರ್ಷ, 49 ದಿನ) ಆಟಗಾರ ಎನಿಸಿದ್ದರು. ಸರ್ ಡೊನಾಲ್ಡ್ ಬ್ರಾಡ್ಮನ್ ಮತ್ತು ವಿನೋದ್ ಕಾಂಬ್ಳಿ ಅವರು ಮೊದಲ ಇಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.