ಹುಬ್ಬಳ್ಳಿ: ಆರಂಭಿಕ ಬ್ಯಾಟ್ಸ್ಮನ್ಗಳಾದ ಡಿ. ನಿಶ್ಚಲ್ (36) ಮತ್ತು ದೇವದತ್ತ ಪಡಿಕ್ಕಲ್ (ಬ್ಯಾಟಿಂಗ್ 58) ಉತ್ತಮ ಆರಂಭದ ಬಲದಿಂದ ಕರ್ನಾಟಕ ತಂಡ ಉತ್ತರ ಪ್ರದೇಶ ವಿರುದ್ಧದ ರಣಜಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ದಿಟ್ಟ ಆರಂಭ ಪಡೆದಿದೆ.

ರಾಜ್ಯ ತಂಡ ವೇಗವಾಗಿ ರನ್ ಕಲೆ ಹಾಕುತ್ತಿದ್ದು, ಇನಿಂಗ್ಸ್ ಮುನ್ನಡೆಯತ್ತ ಸಾಗುತ್ತಿದೆ.

ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಉತ್ತರ ಪ್ರದೇಶ ಮೊದಲ ಇನಿಂಗ್ಸ್ನಲ್ಲಿ 281 ರನ್ ಕಲೆಹಾಕಿ ಆಲೌಟ್ ಆಯಿತು.

ರಾಜ್ಯದ ವೇಗದ ಬೌಲರ್ ಅಭಿಮನ್ಯು ಮಿಥುನ್ ಬಿಗುವಿನ ದಾಳಿಯಿಂದ ಎರಡನೇ ದಿನ 49 ರನ್ ಗಳಿಸುವಷ್ಟರಲ್ಲಿ ಕೊನೆಯ ಐದು ವಿಕೆಟ್ಗಳನ್ನು ಕಳೆದುಕೊಂಡಿತು. ಬುಧವಾರ ಉತ್ತರ ಪ್ರದೇಶ ತಂಡ 112 ನಿಮಿಷ ಬ್ಯಾಟಿಂಗ್ ಮಾಡಿ 21.2 ಓವರ್ಗಳಲ್ಲಿ 49 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಯುವ ಪ್ರತಿಭೆಗಳಾದ ನಿಶ್ಚಲ್ ಮತ್ತು ದೇವದತ್ ಮೊದಲ ವಿಕೆಟ್ಗೆ 95 ರನ್ ಕಲೆಹಾಕಿದರು. ದೇವದತ್ 93 ಎಸೆತಗಳಲ್ಲಿ ಏಳು ಬೌಂಡರಿ ಸೇರಿದಂತೆ 58 ರನ್ ಗಳಿಸಿದ್ದಾರೆ. ಮಧ್ಯಾಹ್ನದ ಚಹಾ ವಿರಾಮದ ವೇಳೆಗೆ ಕರ್ನಾಟಕ 31 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 95 ರನ್ ಕಲೆ ಹಾಕಿದೆ.

ಇನಿಂಗ್ಸ್ ಮುನ್ನಡೆಗೆ 186 ರನ್ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.