ಇಂದೋರ್ : ತಮ್ಮ ಶತಕದ ಕುರಿತ ಅಂಕಿಸಂಖ್ಯೆಗಳನ್ನು ಪ್ರದರ್ಶಿಸಿದ ಪ್ರಚಾಸಕರಿಗೆ ‘ದೃಷ್ಟಿಕೋನ’ದ ಕೊರತೆ ಇದೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸಿಡಿಮಿಡಿಗೊಂಡಿದ್ದಾರೆ.

ಮಂಗಳವಾರ ಅವರು ನ್ಯೂಜಿಲೆಂಡ್ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ ಶತಕ ಗಳಿಸಿದ್ದರು. ಅವರು ಕಳೆದ ಮೂರು ವರ್ಷಗಳಲ್ಲಿ ಗಳಿಸಿದ ಮೊದಲ ಶತಕ ಇದು. ಜನವರಿ 2020ಯಲ್ಲಿ ಕೊನೆಯ ಬಾರಿಗೆ ಶತಕ ಗಳಿಸಿದ್ದರು ಎಂದು ಅಧಿಕೃತ ಪ್ರಸಾರಕರು ವಾಹಿನಿಯಲ್ಲಿ ಪ್ರದರ್ಶಿಸಿದ್ದರು.

‘ಕಳೆದ ಮೂರು ವರ್ಷಗಳಲ್ಲಿ ನಾನು ಆಡಿರುವುದು ಕೇವಲ 12 ಏಕದಿನ ಪಂದ್ಯಗಳನ್ನು ಮಾತ್ರ. ಅಂಕಿ ಅಂಶ ತೋರಿಸುವಾಗ ಅದರೊಳಗಿನ ಸಂಪೂರ್ಣ ತಿರುಳನ್ನೂ ವಿವರಿಸಬೇಕು. ಅದಕ್ಕೊಂದು ದೃಷ್ಟಿಕೋನ ಬೇಕು’ ಎಂದು ರೋಹಿತ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಪ್ರಸಾರಕರು ಸರಿಯಾದ ಚಿತ್ರಣವನ್ನು ನೀಡಬೇಕು. ಈ ಕುರಿತು ನೀವು ಕೂಡ ಎಚ್ಚರವಹಿಸಬೇಕು. ಕೋವಿಡ್ 19 ಕಾಯಿಲೆಯ ಹಾವಳಿಯಿಂದಾಗಿ ಎಲ್ಲರೂ ನಮ್ಮ ಮನೆಗಳಲ್ಲಿ ಬಂದಿಯಾಗಿದ್ದೆವು. ಅಲ್ಲದೇ ನಾನು ಗಾಯಗೊಂಡಿದ್ದೆ. ಆ ಅವಧಿಯಲ್ಲಿ ಆಡಿದ್ದು ಎರಡು ಟೆಸ್ಟ್‌ಗಳಲ್ಲಿ ಮಾತ್ರ. ಏಕದಿನ ಪಂದ್ಯಗಳಲ್ಲಿ ಆಡಿದ್ದು ಕಡಿಮೆ’ ಎಂದು ಸಮರ್ಥಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.