ತಾಷ್ಕೆಂಟ್, ಉಜ್ಬೆಕಿಸ್ತಾನ: ಮೊದಲ ಪಂದ್ಯದಲ್ಲಿ ಮುಗ್ಗರಿಸಿದ್ದ ಭಾರತದ 23 ವರ್ಷದೊಳಗಿನವರ ಬಾಲಕರ ಫುಟ್‌ಬಾಲ್ ತಂಡ ಈಗ ಗೆಲುವಿನ ತವಕದಲ್ಲಿದೆ.

ಭಾನುವಾರ ನಡೆಯುವ ಎಎಫ್‌ಸಿ ಚಾಂಪಿಯನ್‌ಷಿಪ್‌ನ ಅರ್ಹತಾ ಸುತ್ತಿನ ಎರಡನೇ ಹೋರಾಟದಲ್ಲಿ ಭಾರತವು ತಜಿಕಿಸ್ತಾನ ಎದುರು ಸೆಣಸಲಿದೆ.

ಡೆರಿಕ್ ಪೆರೇರಾ ಮಾರ್ಗದರ್ಶನದಲ್ಲಿ ತರಬೇತುಗೊಂಡಿರುವ ಭಾರತ ತಂಡ ‘ಎಫ್’ ಗುಂಪಿನ ತನ್ನ ಮೊದಲ ಹಣಾಹಣಿಯಲ್ಲಿ 0–3 ಗೋಲುಗಳಿಂದ ಹಾಲಿ ಚಾಂಪಿಯನ್ ಉಜ್ಬೆಕಿಸ್ತಾನ ಎದುರು ಸೋತಿತ್ತು.

ವಿನೀತ್ ರಾಯ್ ನೇತೃತ್ವದ ಭಾರತ, ಮೊದಲ ಪಂದ್ಯದಲ್ಲಿ ಹಲವು ತಪ್ಪುಗಳನ್ನು ಮಾಡಿತ್ತು. ಗೋಲು ಗಳಿಸಲು ಸಿಕ್ಕ ಅವಕಾಶಗಳನ್ನು ಸುಲಭವಾಗಿ ಕೈಚೆಲ್ಲಿತ್ತು.

ಮುಂದಿನ ವರ್ಷ ಥಾಯ್ಲೆಂಡ್‌ನಲ್ಲಿ ನಡೆಯುವ ಎಎಫ್‌ಸಿ ಚಾಂಪಿಯನ್‌ಷಿಪ್ ಫೈನಲ್ಸ್‌ಗೆ ಅರ್ಹತೆ ಗಳಿಸುವ ಕನಸು ಹೊತ್ತಿರುವ ಭಾರತ, ಈ ಗುರಿ ಈಡೇರಬೇಕಾದರೆ ಭಾನುವಾರದ ಹೋರಾಟದಲ್ಲಿ ತಜಿಕಿಸ್ತಾನವನ್ನು ಮಣಿಸಲೇಬೇಕು. ಒಂದೊಮ್ಮೆ ಸೋತರೆ ವಿನೀತ್ ಪಡೆಯ ಕನಸು ಕಮರಲಿದೆ.

ಕೆ.ಪಿ.ರಾಹುಲ್ ಮತ್ತು ಡೇನಿಯಲ್ ಲಾಲಿಂಪುಯಿಯಾ ಮೊದಲ ಪಂದ್ಯದಲ್ಲಿ ಪರಿಣಾಮಕಾರಿ ಆಟ ಆಡಿ ಗಮನ ಸೆಳೆದಿದ್ದರು. ಇವರು ತಜಿಕಿಸ್ತಾನ ಎದುರು ಕಾಲ್ಚಳಕ ತೋರಲು ಕಾತರರಾಗಿದ್ದಾರೆ.

‘ಉಜ್ಬೆಕಿಸ್ತಾನ ಬಲಿಷ್ಠ ತಂಡ. ಆ ತಂಡದ ಎದುರು ನಮ್ಮ ಆಟಗಾರರು ಪರಿಣಾಮಕಾರಿ ಸಾಮರ್ಥ್ಯ ತೋರಿದ್ದರು. ಗೋಲು ಗಳಿಸಲು ಸಿಕ್ಕ ಅವಕಾಶಗಳನ್ನು ಕೈಚೆಲ್ಲಿದ್ದರಿಂದ ಹಿನ್ನಡೆ ಎದುರಾಗಿತ್ತು. ತಜಿಕಿಸ್ತಾನ ಎದುರು ಗೆದ್ದು ಹಿಂದಿನ ನಿರಾಸೆ ಮರೆಯಬೇಕು. ಇದಕ್ಕಾಗಿ ನಾವು ಸಜ್ಜಾಗಿದ್ದೇವೆ’ ಎಂದು ಭಾರತ ತಂಡದ ಮುಖ್ಯ ಕೋಚ್ ಪೆರೇರಾ ತಿಳಿಸಿದ್ದಾರೆ.

ಪಂದ್ಯದ ಆರಂಭ: ಸಂಜೆ 5.30.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.