ಮಾಲೆ, ಮಾಲ್ಡಿವ್ಸ್: ಬೆಂಗಳೂರು ಎಫ್ಸಿ ತಂಡವು ಎರಡು ವರ್ಷಗಳ ಬಳಿಕ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ತಂಡವನ್ನು ಮಣಿಸುವ ಛಲದಲ್ಲಿದೆ. ಎಎಫ್ಸಿ ಫುಟ್ಬಾಲ್ ಟೂರ್ನಿಯ ‘ಡಿ‘ ಗುಂಪಿನಲ್ಲಿ ಉಭಯ ತಂಡಗಳ ನಡುವಣ ಹಣಾಹಣಿಗೆ ಬುಧವಾರ ವೇದಿಕೆ ಸಜ್ಜಾಗಿದೆ.

ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ತಂಡವು ಮೊದಲ ಪಂದ್ಯದಲ್ಲಿ ಆತಿಥೇಯ ದೇಶದ ಕ್ಲಬ್ ಈಗಲ್ಸ್ ಎದುರು 1–0ಯಿಂದ ಜಯಿಸಿ ವಿಶ್ವಾಸದಲ್ಲಿದೆ.

2019ರಲ್ಲಿ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಟೂರ್ನಿಯಲ್ಲಿ ಎಟಿಕೆಎಂಬಿ ಬಿಎಫ್ಸಿಗೆ ಕೊನೆಯ ಬಾರಿ ಮಣಿದಿತ್ತು.

ಕೋಲ್ಕತ್ತಾ ಮೂಲದ ಎಟಿಕೆಎಂಬಿ ತಂಡವು ಈ ಬೇಸಿಗೆಯಲ್ಲಿ ಫ್ರಾನ್ಸ್ ಮಿಡ್ಫೀಲ್ಡರ್ ಹ್ಯೂಗೊ ಬೊಮೌಸ್, ಅಮರಿಂದರ್ ಸಿಂಗ್, ಲಿಸ್ಟನ್ ಕೊಲ್ಯಾಸೊ, ಅಶುತೋಷ್ ಮೆಹ್ತಾ ಅವರನ್ನು ಸೇರಿಸಿಕೊಂಡು ಬಲ ವೃದ್ಧಿಸಿಕೊಂಡಿದೆ.

ಬಿಎಫ್ಸಿ ತಂಡಕ್ಕೆ ಮೊದಲ ಪಂದ್ಯದಲ್ಲಿ ಜಯೇಶ್ ರಾಣೆ ಗೋಲು ತಂದುಕೊಟ್ಟಿದ್ದರು. ಗುರುಪ್ರೀತ್ ಸಿಂಗ್ ಕೂಡ ಗೋಲ್ಕೀಪಿಂಗ್ನಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರು. ಅದೇ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿ ಇವರಿಬ್ಬರು ಇದ್ದಾರೆ.

ಉಭಯ ತಂಡಗಳ ನಡುವೆ ಜಿದ್ದಾಜಿದ್ದಿ ಪೈಪೋಟಿ ನಿರೀಕ್ಷಿಸಲಾಗಿದೆ.

ಪಂದ್ಯ ಆರಂಭ: ಸಂಜೆ 4.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.