ನವದೆಹಲಿ: ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯನ್ನು ಭಾರತದ ಪ್ರಮುಖ ಫುಟ್‌ಬಾಲ್ ಲೀಗ್ ಎಂದು ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್ ಶನಿವಾರ ಮಾನ್ಯ ಮಾಡಿದೆ.

2020–21 ಆವೃತ್ತಿಯ ಒಳಗೆ ಐ–ಲೀಗ್‌ನಿಂದ ಎರಡು ತಂಡಗಳನ್ನು ಐಎಸ್‌ಎಲ್‌ಗೆ ಸೇರಿಸುವಂತೆ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ಗೆ ಸಲಹೆಯನ್ನೂ ನೀಡಿದೆ.

ವಿಯೆಟ್ನಾಂನಲ್ಲಿ ನಡೆದ ಎಎಫ್‌ಸಿ ಕಾರ್ಯನಿರ್ವಾಹಕ ಸಮಿತಿಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಈಗ ನಡೆಯುತ್ತಿರುವ ಆರನೇ ಆವೃತ್ತಿಯಲ್ಲೇ ಲೀಗ್‌ಗೆ ಮಾನ್ಯತೆ ನೀಡಲಾಗಿದೆ. ಐಎಸ್‌ಎಲ್‌ನಲ್ಲಿ ಚಾಂಪಿಯನ್ ಆಗುವ ತಂಡ ಎಎಫ್‌ಸಿ ಚಾಂಪಿಯನ್ಸ್ ಲೀಗ್ ಪ್ಲೇ ಆಫ್‌ನಲ್ಲಿ ಆಡಲು ಅರ್ಹತೆ ಗಳಿಸಲಿದೆ. ಐ–ಲೀಗ್ ಟೂರ್ನಿಯ ವಿಜೇತ ತಂಡ ಎಎಫ್‌ಸಿ ಕಪ್ ಪ್ಲೇ ಆಫ್‌ನಲ್ಲಿ ಆಡಲು ಅವಕಾಶ ಗಳಿಸಲಿದೆ ಎಂದು ಸಭೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.