ಮಡಗಾಂವ್: ಪೆನಾಲ್ಟಿ ಕಾರ್ನರ್ ಅನ್ನು ಗೋಲ್ನಲ್ಲಿ ಪರಿವರ್ತಿಸಿದ ಜೊವೊ ವಿಕ್ಟರ್ ಹೈದರಾಬಾದ್ ತಂಡದ ಸೋಲು ತಪ್ಪಿಸಿದರು.

ಶುಕ್ರವಾರ ಫತೋರ್ಡಾ ಕ್ರೀಡಾಂಗಣದಲ್ಲಿ ಹೈದರಾಬಾದ್ ಎಫ್ಸಿ ಮತ್ತು ಎಟಿಕೆ ಮೋಹನ್ ಬಾಗನ್ ನಡುವಣ ಪಂದ್ಯವು 1–1ರಿಂದ ಡ್ರಾ ಆಯಿತು.

ಆರಂಭದಿಂದಲೂ ಎರಡೂ ತಂಡಗಳ ಆಟಗಾರರು ತುರುಸಿನ ಪೈಪೋಟಿಯೊಡ್ಡಿದರು. ಮೊದಲರ್ಧದಲ್ಲಿ ಗೋಲು ದಾಖಲಾಗಲಿಲ್ಲ. ಆದರೆ 54ನೇ ನಿಮಿಷದಲ್ಲಿ ಎಟಿಕೆ ತಂಡದ ಮನ್ವೀರ್ ಸಿಂಗ್ ಗೋಲು ಹೊಡೆದರು. ಇದರಿಂದಾಗಿ ತಂಡವು 1–0 ಮುನ್ನಡೆ ಗಳಿಸಿತು.

ಆದರೆ ಈ ಸಂತಸವು ಹತ್ತು ನಿಮಿಷಗಳವರೆಗೆ ಮಾತ್ರ ಉಳಿಯಿತು. 65ನೇ ನಿಮಿಷದಲ್ಲಿ ಜೊವೊ ಕಾಲ್ಚಳಕದಿಂದ ಗೋಲು ದಾಖಲಾಯಿತು. ಉಳಿದ ಅವಧಿಯಲ್ಲಿ ಉಭಯ ತಂಡಗಳ ರಕ್ಷಣಾ ಆಟಗಾರರು ಬಿಗಿಯಾಗಿ ಆಡಿದ್ದರಿಂದ ಗೋಲು ಹೊಡೆಯುವುದು ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.