ಮುಂಬೈ: ಎಂಟು ಬಾರಿಯ ಚಾಂಪಿಯನ್ ಚೀನಾ ಎಎಫ್ಸಿ ಮಹಿಳೆಯರಏಷ್ಯಾಕಪ್ ಫುಟ್ಬಾಲ್ ಟೂರ್ನಿಯಲ್ಲಿ ಮತ್ತೊಂದು ಸೊಗಸಾದ ಗೆಲುವು ದಾಖಲಿಸಿತು. ಭಾನುವಾರ ನಡೆದ ಪಂದ್ಯದಲ್ಲಿ ವ್ಯಾಂಗ್ ಶುಯಾಂಗ್ ಮತ್ತು ವಾಂಗ್ ಶನ್ಸೇನ್ ಅವರ ಭರ್ಜರಿ ಆಟದ ಬಲದಿಂದ ಚೀನಾ 7–0ಯಿಂದ ಇರಾನ್ ವಿರುದ್ಧ ಜಯ ಗಳಿಸಿತು.

ಜನ್ಮದಿನ ಆಚರಿಸಿದ ಶುಯಾಂಗ್ 28ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 43ನೇ ನಿಮಿಷದಲ್ಲಿ ಕ್ಸಿಯಾ ಕ್ಸುಯಿ ಗೋಲು ಗಳಿಸಿದರೆ 49ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯಲ್ಲಿ ಶುಯಾಂಗ್ ಚೆಂಡನ್ನು ಗುರಿ ಮುಟ್ಟಿಸಿದರು.

55 ಮತ್ತು 59ನೇ ನಿಮಿಷಗಳಲ್ಲಿ ವಾಂಗ್ ಶನ್ಸೇನ್ ಗಳಿಸಿದ ಗೋಲುಗಳೊಂದಿಗೆ ತಂಡದ ಮುನ್ನಡೆ ಮತ್ತಷ್ಟು ಹೆಚ್ಚಿತು. ಜಿಯಾಲಿ ಟ್ಯಾಂಗ್ 77ನೇ ನಿಮಿಷದಲ್ಲಿ ತಂಡದ ಅರನೇ ಗೋಲು ಗಳಿಸಿ ಎದುರಾಳಿಗಳ ಸಂಕಷ್ಟ ಹೆಚ್ಚಿಸಿದರು. ಒತ್ತಡದಲ್ಲೇ ಮುಂದುವರಿದ ಇರಾನ್ 82ನೇ ನಿಮಿಷದಲ್ಲಿ ‘ಉಡುಗೊರೆ’ ನೀಡಿ ಚೀನಾದ ಗೆಲುವಿನ ಅಂತರ ಹೆಚ್ಚಿಸಿದರು. ಫಾತಿಮಾ ಅಡೇಲಿ ಅವರಿಂದ ಈ ಪ್ರಮಾದ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.