ಬೆಂಗಳೂರು: ಕಾವ್ಯಾ ಪಿ. ಗಳಿಸಿದ ನಾಲ್ಕು ಗೋಲುಗಳ ನೆರವಿನಿಂದ ಕಿಕ್ಸ್ಟಾರ್ಟ್ ಎಫ್ಸಿ ತಂಡವು ಭರ್ಜರಿ ಜಯ ಗಳಿಸಿತು. ಇಲ್ಲಿ ನಡೆಯುತ್ತಿರುವ ರಾಜ್ಯ ಫುಟ್ಬಾಲ್ ಸಂಸ್ಥೆಯ ಮಹಿಳಾ ಲೀಗ್ನಲ್ಲಿ ಆ ತಂಡವು ಮಂಗಳವಾರ 7–0ಯಿಂದ ಸ್ಲ್ಯಾಮ್ಜರ್ಸ್ ಬೆಳಗಾವಿ ತಂಡವನ್ನು ಸೋಲಿಸಿತು.

ಕಿಕ್ಸ್ಟಾರ್ಟ್ ತಂಡದ ನವೊಬಿ ಚಾನು ಲಾಯಿಶ್ರಾಮ್ 23ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿದರು. 24, 44, 78 ಹಾಗೂ 90ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದ ಕಾವ್ಯಾ ತಂಡದ ಗೆಲುವನ್ನು ಖಚಿತಪಡಿಸಿದರು. ಕ್ಷೇತ್ರಿಮಯುಮ್ ಮಾರ್ಗರೇಟ್ ದೇವಿ (30) ಹಾಗೂ ಬೀಬಿ ನೌಶಾಮ್ ಮಮೋದೆ (87ನೇ ನಿಮಿಷ) ತಲಾ ಒಂದು ಗೋಲು ಹೊಡೆದರು.

ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಯುನೈಟೆಡ್ ಎಫ್ಸಿಯು 1–0ಯಿಂದ ಪರಿಕ್ರಮ ಎಫ್ಸಿ ತಂಡವನ್ನು ಸೋಲಿಸಿತು. ವಿಜೇತ ತಂಡದ ಸನ್ಫಿದಾ ನೋಂಗ್ರುಮ್ 79ನೇ ನಿಮಿಷದಲ್ಲಿ ಗೋಲು ಹೊಡೆದರು.

ಬುಧವಾರ ನಡೆಯುವ ಪಂದ್ಯದಲ್ಲಿ ಇಂಡಿಯನ್ ಫುಟ್ಬಾಲ್ ಫ್ಯಾಕ್ಟರಿ–ಮಿಸಾಕ ಯುನೈಟೆಡ್ ಎಫ್ಸಿ ಮುಖಾಮುಖಿಯಾಗಲಿವೆ.

ಪಂದ್ಯಗಳ ಮುಂದೂಡಿಕೆ: ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆಯ (ಬಿಡಿಎಫ್ಎ) ಸೂಪರ್ ಡಿವಿಷನ್ ಲೀಗ್ ಪಂದ್ಯಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.