ಮಂಗಳವಾರ, 2 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಾಜಿ ಫುಟ್ಬಾಲ್‌ ಆಟಗಾರ ಭೂಪಿಂದರ್‌ ಸಿಂಗ್‌ ರಾವತ್‌ ನಿಧನ

Published 30 ಜೂನ್ 2024, 14:25 IST
Last Updated 30 ಜೂನ್ 2024, 14:25 IST
ಅಕ್ಷರ ಗಾತ್ರ

ಸೂರತ್‌: ಭಾರತದ ಮಾಜಿ ಫುಟ್ಬಾಲ್‌ ಆಟಗಾರ ಭೂಪಿಂದರ್‌ ಸಿಂಗ್‌ ರಾವತ್‌ ಅನಾರೋಗ್ಯದಿಂದ ಭಾನುವಾರ ನಿಧನರಾದರು. 

ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ. ಭೂಪಿಂದರ್‌ ಸಿಂಗ್‌ ರಾವತ್‌ ನಿಧನದ ಸುದ್ದಿಯನ್ನು ಭಾರತೀಯ ಫುಟ್ಬಾಲ್‌ ಫೆಡರೇಶನ್‌ ಖಚಿತಪಡಿಸಿದೆ.

ಭಾರತದ ಪರವಾಗಿ ಮಲೇಷ್ಯಾದಲ್ಲಿ 1969ರಲ್ಲಿ ಮೆರ್ಡೆಕಾ ಕಪ್‌ ಟೂರ್ನಿಯಲ್ಲಿ ಆಡಿದ್ದರು. ಅವರ ಆಟದ ವೇಗ, ಎದುರಾಳಿ ತಂಡಗಳ ರಕ್ಷಣೆಯನ್ನು ಭೇದಿಸುವ ಜಾಣ್ಮೆಗೆ ಹೆಸರಾಗಿದ್ದರು. ಆದ್ದರಿಂದ ಅಭಿಮಾನಿಗಳು ಅವರನ್ನು ಸ್ಕೂಟರ್‌ ಎಂಬ ಹೆಸರಿನಿಂದಲೇ ಕರೆಯುತ್ತಿದ್ದರು. 

1960–70ರ ದಶಕದಲ್ಲಿ ಅವರು ಭಾರತವನ್ನು ಪ್ರತಿನಿಧಿಸಿದ್ದರು. ರಾವತ್‌ ಫುಟ್ಬಾಲ್‌ನಲ್ಲಿ ಮಿಡ್‌ಫೀಲ್ಡರ್‌ ಆಗಿದ್ದರು. ಮೆರ್ಡೆಕಾ ಹಾಗೂ ವೆಸ್ಟರ್ನ್‌ ಆಸ್ಟ್ರೇಲಿಯಾ ಕಪ್ ಅನ್ನು ಭಾರತ ಗೆದ್ದಿತ್ತು. ಈ ತಂಡದಲ್ಲಿ ರಾವತ್‌ ಇದ್ದರು. 

ರಾವತ್‌ ನಿಧನಕ್ಕೆ ಫುಟ್ಬಾಲ್‌ ಆಟಗಾರರು, ಅಭಿಮಾನಿಗಳು ಹಾಗೂ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT