ಬ್ಯಾಂಬೊಲಿಮ್, ಗೋವಾ: ಜಿದ್ದಾಜಿದ್ದಿಯ ಹೋರಾಟದಲ್ಲಿ ಕೊನೆಯ ವರೆಗೂ ಪಟ್ಟುಬಿಡದೆ ಸೆಣಸಿದ ಮುಂಬೈ ಸಿಟಿ ಎಫ್ಸಿ ಮತ್ತು ಆತಿಥೇಯ ಎಫ್ಸಿ ಗೋವಾ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಸೋಮವಾರದ ಪಂದ್ಯವನ್ನು 3–3ರಲ್ಲಿ ಡ್ರಾ ಮಾಡಿಕೊಂಡವು. 90ನೇ ನಿಮಿಷದ ವರೆಗೆ ಉಭಯ ತಂಡಗಳು ತಲಾ ಎರಡು ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ಇಂಜುರಿ ಅವಧಿಯ ಐದು ನಿಮಿಷಗಳಲ್ಲಿ ಎರಡೂ ತಂಡಗಳು ಒಂದೊಂದು ಗೋಲು ಬಾರಿಸಿದವು.

ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಮುಂಬೈ ಆ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕೆ ಇಳಿದಿದ್ದರೆ ಗೋವಾ ಅಗ್ರ ನಾಲ್ಕರಲ್ಲಿ ಸ್ಥಾನ ಗಳಿಸುವ ಉದ್ದೇಶದೊಂದಿಗೆ ಸೆಣಸಿತ್ತು. 20ನೇ ನಿಮಿಷದಲ್ಲಿ ಹ್ಯೂಗೊ ಬೌಮೋಸ್ ಮತ್ತು 26ನೇ ನಿಮಿಷದಲ್ಲಿ ಲೀ ಫಾಂಡ್ರೆ ಗೋಲು ಗಳಿಸಿ ಗೋವಾಗೆ ನಿರಾಸೆ ಮೂಡಿಸಿದರು. ಮೊದಲಾರ್ಧದ ಇಂಜುರಿ ಅವಧಿಯಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ಗ್ಲ್ಯಾನ್ ಮಾರ್ಟಿನ್ ಅವರು ಗೋವಾ ಪಾಳಯದಲ್ಲಿ ನಿರೀಕ್ಷೆ ಮೂಡಿಸಿದರು. ವಿರಾಮದ ನಂತರ ಆರನೇ ನಿಮಿಷದಲ್ಲಿ ಇಗರ್ ಆಂಗುಲೊ ಗಳಿಸಿದ ಗೋಲಿನ ಮೂಲಕ ಗೋವಾ ನಿಟ್ಟುಸಿರು ಬಿಟ್ಟಿತು.

ನಂತರ ಉಭಯ ತಂಡಗಳು ಮುನ್ನಡೆಗಾಗಿ ತುರುಸಿನ ಹೋರಾಟ ನಡೆಸಿದವು. 90ನೇ ನಿಮಿಷದಲ್ಲಿ ರಾವ್ಲಿನ್ ಬೋರ್ಜೆಸ್ ಚೆಂಡನ್ನು ಗುರಿ ಮುಟ್ಟಿಸಿ ಮುಂಬೈ ಸಿಟಿ ಪಾಳಯದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು. ಆದರೆ ಕ್ಷಣಾರ್ಧದಲ್ಲಿ ಇಶಾನ್ ಪಂಡಿತ ಗಳಿಸಿದ ಗೋಲಿನ ಮೂಲಕ ಗೋವಾ ಪಾಳಯದವರೂ ಸಂಭ್ರಮದಲ್ಲಿ ಕುಣಿದಾಡಿದರು. ಇದರೊಂದಿಗೆ ಗೋವಾ ತಂಡ ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು ಐದನೇ ಸ್ಥಾನಕ್ಕೆ ತಳ್ಳಿ ಮೂರನೇ ಸ್ಥಾನಕ್ಕೇರಿತು. ಹೈದರಾಬಾದ್ ಎಫ್ಸಿ ನಾಲ್ಕನೇ ಸ್ಥಾನಕ್ಕೆ ಕುಸಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.