ಹೈದರಾಬಾದ್: ಇಂಡಿಯನ್ ಸೂಪರ್ ಲೀಗ್ ತಂಡ ಹೈದರಾಬಾದ್ ಎಫ್ಸಿ ಪರ ಆಡಲು ಡಿಫೆಂಡರ್ ಕೊನ್ಶಾಮ್ ಚಿಂಗ್ಲೆಸನಾ ಸಿಂಗ್ ಅವರು ಸಹಿ ಹಾಕಿದ್ದಾರೆ. ಟೂರ್ನಿಯ ಮುಂದಿನ ಎರಡು ಆವೃತ್ತಿಗಳಲ್ಲಿ ಅವರು ಹೈದರಾಬಾದ್ ಪರ ಆಡಲಿದ್ದಾರೆ.

ಫುಟ್ಬಾಲ್ ವಲಯದಲ್ಲಿ ‘ಸನಾ’ ಎಂದೇ ಕರೆಯಲಾಗುವ ಮಣಿಪುರದ ಈ ಆಟಗಾರ ಎಫ್ಸಿ ಗೋವಾಪರ ಮೂರು ವರ್ಷಗಳ ಕಾಲ ಆಡಿದ್ದಾರೆ.

‘ಹೈದರಾಬಾದ್ ಎಫ್ಸಿ ಸಾಕಷ್ಟು ಮಹತ್ವಾಕಾಂಕ್ಷೆಯೊಂದಿಗೆ ಹೊಸ ತಂಡವನ್ನು ಕಟ್ಟುತ್ತಿದೆ. ಇದರ ಭಾಗವಾಗಲು ನಾನು ಬಯಸುತ್ತೇನೆ. ಟ್ರೋಫಿಗಳನ್ನು ಗೆಲ್ಲಿಸಿಕೊಡುವುದರ ಮೂಲಕ ಭಾರತದ ಫುಟ್ಬಾಲ್ನಲ್ಲಿ ಕ್ಲಬ್ನ ವೈಭವವನ್ನು ಮರುಸ್ಥಾಪಿಸಲು ನೆರವಾಗುತ್ತೇನೆ‘ ಎಂದು ಚಿಂಗ್ಲೆನ್ಸನಾ ಸಿಂಗ್ ಹೇಳಿದ್ದಾರೆ.

ಈ ಋತುವಿನಲ್ಲಿ ಹೈದರಾಬಾದ್ ಎಫ್ಸಿ ಪರ ಸಹಿ ಹಾಕಿದ ಭಾರತದ ಮೂರನೇ ಆಟಗಾರ ಚಿಂಗ್ಲೆನ್ಸನಾ. ಈ ಹಿಂದೆ ಸುಬ್ರತಾ ಪಾಲ್ ಹಾಗೂ ಹಲೀಚರಣ್ ನಾರ್ಜರಿ ಅವರು ಈ ಕ್ಲಬ್ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.