ಕೋಲ್ಕತ್ತ: ಸತತ ಗೆಲುವಿನ ಹಾದಿಯಲ್ಲಿ ಸಾಗಿರುವ ಮೋಹನ್ ಬಾಗನ್ ತಂಡ ಐ–ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಭಾನುವಾರ ಶಿಲ್ಲಾಂಗ್ ಲಾಜೊಂಗ್ ಎಫ್ಸಿಯನ್ನು ಎದುರಿಸಲಿದೆ.

ತವರಿನ ಪ್ರೇಕ್ಷಕರ ಮುಂದೆ ಉತ್ತಮ ಸಾಮರ್ಥ್ಯ ತೋರುವ ಭರವಸೆಯಲ್ಲಿರುವ ತಂಡ ಗೆದ್ದು ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರುವ ನಿರೀಕ್ಷೆಯಲ್ಲಿದೆ. ಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಶಿಲಾಂಗ್ ಮೊದಲ ಜಯದ ಗುರಿಯೊಂದಿಗೆ ಕಣಕ್ಕೆ ಇಳಿಯಲಿದೆ.

ಹಾಲಿ ಚಾಂಪಿಯನ್ ಮಿನರ್ವಾ ಪಂಜಾಬ್ ಮತ್ತು ತನ್ನದೇ ರಾಜ್ಯದ ಈಸ್ಟ್ ಬೆಂಗಾಲ್ ತಂಡವನ್ನು ಸೋಲಿಸಿರುವ ಮೋಹನ್ ಬಾಗನ್ ಟೂರ್ನಿಯಲ್ಲಿ ಈವರೆಗೆ ತವರಿನ ಪ್ರೇಕ್ಷ ಕರನ್ನು ನಿರಾಸೆಗೊಳಿಸಲಿಲ್ಲ. ತಂಡ ಎಂಟು ಪಂದ್ಯಗಳಲ್ಲಿ 12 ಪಾಯಿಂಟ್ ಕಲೆ ಹಾಕಿದೆ. ಐದು ಪಂದ್ಯಗಳನ್ನು ಆಡಿರುವ ಶಿಲ್ಲಾಂಗ್ ಇನ್ನೂ ಗೆಲುವಿನ ಖಾತೆ ತೆರೆಯಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.