ವಾಸ್ಕೊ: ಹೊಸ ಕೋಚ್ ಮಾರ್ಗದರ್ಶನದಲ್ಲಿ ಮೊದಲ ಬಾರಿ ಕಣಕ್ಕೆ ಇಳಿದ ಎಫ್ಸಿ ಗೋವಾ ತಂಡದ ಗೆಲುವಿನ ಆಸೆಗೆ ಜೊನಾಥಾಸ್ ಕ್ರಿಸ್ಟಿಯನ್ ತಣ್ಣೀರು ಸುರಿದರು. ಶುಕ್ರವಾರ ರಾತ್ರಿ ಇಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಎಫ್ಸಿ ಗೋವಾ ಮತ್ತು ಒಡಿಶಾ ಎಫ್ಸಿ ತಂಡಗಳ ನಡುವಿನ ಪಂದ್ಯ 1–1ರ ಡ್ರಾದಲ್ಲಿ ಮುಕ್ತಾಯವಾಯಿತು.

ದೇವೇಂದ್ರ ಮರ್ಗಾಂವ್ಕರ್ ಅವರ ನೆರವಿನೊಂದಿಗೆ ಇವಾನ್ ಗೊಂಜಾಲೆಜ್ 42ನೇ ನಿಮಿಷದಲ್ಲಿ ಗಳಿಸಿದ ಗೋಲಿನೊಂದಿಗೆ ಗೋವಾ ತಂಡ ಮುನ್ನಡೆ ಗಳಿಸಿತ್ತು. ಆದರೆ 53ನೇ ನಿಮಿಷದಲ್ಲಿ ಜೊನಾಥಾಸ್ ಗಳಿಸಿದ ಗೋಲಿನೊಂದಿಗೆ ಒಡಿಶಾ ತಿರುಗೇಟು ನೀಡಿತು. ಆರಂಭದಲ್ಲಿ ಸತತ ಮೂರು ಪಂದ್ಯಗಳನ್ನು ಸೋತ ಕಾರಣ ತಂಡದ ಕೊಚ್ ಯುವಾನ್ ಫೆರಾಂಡೊ ಅವರನ್ನು ಗೋವಾ ತಂಡ ವಜಾಗೊಳಿಸಿತ್ತು. ನಂತರ ಡೆರಿಕ್ ಪೆರೇರಾ ಅವರನ್ನು ಕೋಚ್ ಆಗಿ ನೇಮಕ ಮಾಡಿಕೊಂಡಿತ್ತು.

ಇಂದು ಬಿಡುವು

ಕ್ರಿಸ್ಮಸ್ ಪ್ರಯುಕ್ತ ಶನಿವಾರ ಪಂದ್ಯ ಇಲ್ಲ. ಭಾನುವಾರ ತಿಲಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್ಸಿ ಮತ್ತು ಜೆಮ್ಶೆಡ್ಪುರ ಎಫ್ಸಿ ತಂಡಗಳು ಸೆಣಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.