ಮುಂಬೈ: ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಬುಧವಾರ ಇಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಎಫ್‌ಸಿ ಎದುರು ಡ್ರಾ ಮಾಡಿಕೊಂಡಿತು.

ಬಿಎಫ್‌ಸಿ ತಂಡವು ಇದರೊಂದಿಗೆ ಟೂರ್ನಿಯ ಅಂಕಪಟ್ಟಿಯಲ್ಲಿ 10 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿಯಿತು. ಒಟ್ಟು ನಾಲ್ಕು ಪಂದ್ಯಗಳಲ್ಲಿ ಆಡಿರುವ ಬಿಎಫ್‌ಸಿ ಈ ಮೊದಲಿನ ಮೂರರಲ್ಲಿ ಜಯಿಸಿತ್ತು.

ಮುಂಬೈ ಫುಟ್‌ಬಾಲ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ ತಂಡದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರು ಮುಂಬೈ ತಂಡದ ಗೋಲು ಗಳಿಕೆಯ ಪ್ರಯತ್ನಗಳನ್ನು ವಿಫಲಗೊಳಿಸಿದರು.

ಬಿಎಫ್‌ಸಿ ತಂಡದ ಆಟಗಾರರು ಪಾಸಿಂಗ್‌ನಲ್ಲಿ ಹೆಚ್ಚು ಚುರುಕಾಗಿದ್ದರು. ಚುಟುಕಾದ ಪಾಸ್‌ಗಳನ್ನು ನೀಡುವ ಮೂಲಕ ಎದುರಾಳಿಗಳ ಮೇಲೆ ಒತ್ತಡ ಹಾಕಿದರು. ಬಿಎಫ್‌ಸಿ ಆಟಗಾರರು ಒಟ್ಟು 430 ಪಾಸ್ ಮತ್ತು ಮುಂಬೈ ತಂಡವು 319 ಪಾಸ್ ದಾಖಲಿಸಿದವು.

ಮುಂಬೈ ತಂಡದ ಮಂಜೋರೊ, ಬಿಎಫ್‌ಸಿಯ ಎಡ್ಗರ್ ಮಾಂಡೆಜ್, ನೋರೆಮ್ ರೋಷನ್ ಸಿಂಗ್ ಹಾಗೂ ವಿನಿತ್ ವೆಂಕಟೇಶ್ ಅವರು ಹಳದಿ ಕಾರ್ಡ್ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.