ಚೆನ್ನೈ: ಮೊದಲ ಎರಡೂ ಪಂದ್ಯಗಳಲ್ಲಿ ಸೋತು ನಿರಾಸೆಗೆ ಒಳ ಗಾಗಿರುವ ಚೆನ್ನೈಯಿನ್ ಎಫ್‌ಸಿ ತಂಡ ಇಂಡಿಯನ್ ಸೂಪರ್ ಲೀಗ್‌ನ (ಐಎಸ್‌ಎಲ್) ಮೊದಲ ಜಯದ ನಿರೀಕ್ಷೆಯೊಂದಿಗೆ ಗುರುವಾರ ಕಣಕ್ಕೆ ಇಳಿಯಲಿದೆ.

ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಆತಿಥೇಯರು ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧ ಸೆಣಸಲಿದೆ.

ಎರಡು ಪಂದ್ಯಗಳಲ್ಲಿ ಸೋತರೂ ತಂಡದ ಸಾಮರ್ಥ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸದ ಕೋಚ್ ಜಾನ್ ಗ್ರೆಗರಿ ತಂಡ ಲಯಕ್ಕೆ ಮರಳಿ ಮೂರನೇ ಪಂದ್ಯದಲ್ಲಿ ಗೆದ್ದು ಸಂಭ್ರಮಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ನಾರ್ತ್ ಈಸ್ಟ್ ಯುನೈಟೆಡ್ ತಂಡ ಒಮ್ಮೆಯೂ ಪ್ಲೇ ಆಫ್ ಹಂತ ತಲುಪಲಿಲ್ಲ. ಆದರೆ ಈ ಬಾರಿ ಉತ್ತಮ ಆರಂಭ ಕಂಡಿದೆ. ಆದ್ದರಿಂದ ತಂಡವನ್ನು ಲಘುವಾಗಿ ಕಾಣಲು ಸಾಧ್ಯವಿಲ್ಲ’ ಎಂದು ಗ್ರೆಗರಿ ಹೇಳಿದರು.

ಮೊದಲ ಪಂದ್ಯದಲ್ಲಿ ಎಟಿಕೆಯನ್ನು ಮಣಿಸಿದ್ದ ನಾರ್ತ್ ಈಸ್ಟ್ ಯುನೈಟೆಡ್ ನಂತರ ಗೋವಾ ಜೊತೆ ಡ್ರಾ ಸಾಧಿಸಿತ್ತು. ಡ್ರಾ ಪಂದ್ಯದಲ್ಲೂ ಉತ್ತಮ ಸಾಮರ್ಥ್ಯ ತೋರಿತ್ತು.

ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ವಿರುದ್ಧ ಹೋರಾಡಿ 0–1ರಿಂದ ಸೋತಿದ್ದ ಚೆನ್ನೈಯಿನ್ ಎಫ್‌ಸಿ ಎರಡನೇ ಪಂದ್ಯದಲ್ಲಿ ಗೋವಾ ಎಫ್‌ಸಿಗೆ 1–3ರಿಂದ ಮಣಿದಿತ್ತು.

ಎಟಿಕೆ ತಂಡಕ್ಕೆ ಜಯ

ನವದೆಹಲಿ: ಇಲ್ಲಿನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಎಟಿಕ ತಂಡ ಆತಿಥೇಯ ಡೆಲ್ಲಿ ಡೈನಾಮೊಸ್ ವಿರುದ್ಧ 2–1ರಿಂದ ಗೆದ್ದಿತು.

ಎಟಿಕೆ ಪರ ಬಲವಂತ್ ಸಿಂಗ್ (20ನೇ ನಿಮಿಷ) ಮತ್ತು ಮೈಮೋನಿ ನಾಸಿರ್ (84ನೇ ನಿ) ಗೋಲು ಗಳಿಸಿದರೆ, ಡೆಲ್ಲಿ ಪರ ಏಕೈಕ ಗೋಲು ಪ್ರೀತಮ್ ಕೊತಾಲ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.