ಬ್ಯಾಂಬೊಲಿಮ್: ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವು ಕಾಣದ ಆತಿಥೇಯ ಎಫ್‌ಸಿ ಗೋವಾ ತಂಡವು ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಮಂಗಳವಾರ ಒಡಿಶಾ ಎಫ್‌ಸಿ ಸವಾಲು ಎದುರಿಸಲಿದೆ.

14 ಪಂದ್ಯಗಳನ್ನು ಆಡಿರುವ ಗೋವಾ ತಂಡವು ಅಷ್ಟೇ ಪಾಯಿಂಟ್ಸ್ ಕಲೆಹಾಕಿದ್ದು, ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಪ್ಲೇ ಆಫ್ ಆಸೆ ಜೀವಂತವಾಗಿರಲು ತಂಡವು ಮುಂಬರುವ ಪಂದ್ಯಗಳನ್ನು ಗೆಲ್ಲುತ್ತ ಸಾಗಬೇಕು.

ಒಡಿಶಾ ಕೂಡ ಇದುವರೆಗೆ ಉತ್ತಮ ಸಾಮರ್ಥ್ಯವನ್ನೇನೂ ತೋರಿಲ್ಲ. ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ತಂಡವು ಸದ್ಯ 13 ಪಂದ್ಯಗಳಿಂದ 17 ಪಾಯಿಂಟ್ಸ್ ಗಳಿಸಿದ್ದು, ಎಂಟನೇ ಸ್ಥಾನದಲ್ಲಿದೆ. ತಂಡಕ್ಕೆ ಪ್ಲೇ ಆಫ್‌ಗೇರಲು ಇನ್ನೂ ಅವಕಾಶವಿದೆ.

ಗೋವಾ ತಂಡ ಈ ಋತುವಿನ ಒಂದು ಪಂದ್ಯದಲ್ಲಿ ಹೆಚ್ಚು ಕ್ರಾಸ್‌ಗಳನ್ನು ಮಾಡಿದ ದಾಖಲೆ ಮಾಡಿದೆ. ಈಸ್ಟ್ ಬೆಂಗಾಲ್ ಎದುರಿನ ಹಣಾಹಣಿಯಲ್ಲಿ 31 ಕ್ರಾಸ್‌ಗಳು ದಾಖಲಾಗಿದ್ದವು. ಬ್ರೆಂಡನ್ ಫರ್ನಾಂಡಿಸ್ ಈ ಪಂದ್ಯದಲ್ಲೂ ಕಣಕ್ಕಿಳಿಯಲಿದ್ದು, ತಂಡದ ಬಲ ಹೆಚ್ಚಿದೆ.

ಜೊನಾಥಸ್ (ನಾಲ್ಕು ಗೋಲು) ಮತ್ತು ಅರಿದಾಯಿ ಕ್ಯಾಬ್ರೆರಾ (5) ಅವರು ಈ ಬಾರಿ ಒಡಿಶಾ ತಂಡದಲ್ಲಿ ಮಿಂಚಿದ್ದಾರೆ.

ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುವ ಸಾಧ್ಯತೆಯಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.