ಗೋವಾ: ಜಿದ್ದಾಜಿದ್ದಿಯ ಹಣಾಹಣಿಯಲ್ಲಿ ಗೋವಾ ಎಫ್ಸಿ ಮತ್ತು ಜೆಮ್ಶೆಡ್ಪುರ ಎಫ್ಸಿ (ಜೆಎಫ್ಸಿ) ತಂಡಗಳು ಸಮಬಲ ಸಾಧಿಸಿದವು. ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಪಂದ್ಯ ಗೋಲು ರಹಿತ ಡ್ರಾದಲ್ಲಿ ಮುಕ್ತಾಯಗೊಂಡಿತು.

ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಗೋವಾ ಮತ್ತು ಐದನೇ ಸ್ಥಾನದಲ್ಲಿರುವ ಜೆಫ್ಸಿ ನಡುವಿನ ಪಂದ್ಯ ಕುತೂಹಲಕಾರಿಯಾಗಿತ್ತು. ಜಯ ಗಳಿಸಿ ಗೋವಾದ ಸ್ಥಾನವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದ ಜೆಫ್ಸಿ ಕೊನೆಗೂ ನಿರಾಸೆಗೆ ಒಳಗಾಯಿತು.

ಉತ್ತಮ ಆರಂಭ ಕಂಡ ಜೆಎಫ್ಸಿ ಮೊದಲ ಕೆಲವು ನಿಮಿಷಗಳಲ್ಲಿ ಆಕ್ರಮಣಕಾರಿ ಆಟವಾಡಿ ಎದುರಾಳಿ ಪಾಳಯದಲ್ಲಿ ಆತಂಕ ಸೃಷ್ಟಿಸಿತು. ನಂತರ ಎಚ್ಚೆತ್ತುಕೊಂಡ ಆತಿಥೇಯರು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು.

ನಾಳೆ ಬೆಂಗಳೂರಿನಲ್ಲಿ ಪಂದ್ಯ: ಐಎಸ್ಎಲ್ನಲ್ಲಿ ಮಂಗಳವಾರ ಪಂದ್ಯ ಇಲ್ಲ. ಬುಧವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ಎಫ್ಸಿ ಮತ್ತು ನಾರ್ತ್ ಈಸ್ಟ್ ಯುನೈಟೆಡ್ ತಂಡಗಳು ಸೆಣಸಲಿವೆ.

ಎಎಫ್ಸಿ ಟೂರ್ನಿಗಾಗಿ ಡಿಸೆಂಬರ್ 16ರಿಂದ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಈ ತಿಂಗಳ 25ರಿಂದ ಪಂದ್ಯಗಳು ಮತ್ತೆ ಆರಂಭಗೊಂಡಿದ್ದವು. ಬಿಡುವಿನ ವರೆಗೆ ಅಜೇಯವಾಗಿದ್ದ ಬಿಎಫ್ಸಿ ಭಾನುವಾರ ಮುಂಬೈ ಸಿಟಿ ತಂಡಕ್ಕೆ ಮಣಿದು ಈ ಬಾರಿ ಮೊದಲ ಸೋಲಿನ ಕಹಿ ಅನುಭವಿಸಿತ್ತು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ತಂಡ ಅಗ್ರ ಸ್ಥಾನವನ್ನು ಕಳೆದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.