ಬೆಂಗಳೂರು: ಕಾವ್ಯಾ ಫಕ್ಕೀರಸ್ವಾಮಿ ಗಳಿಸಿದ ಹ್ಯಾಟ್ರಿಕ್ ಗೋಲುಗಳ ಬಲದಿಂದ ಕಿಕ್ಸ್ಟಾರ್ಟ್ ಫುಟ್ಬಾಲ್ ಕ್ಲಬ್ ತಂಡವು ಕೆಎಸ್ಎಫ್ಎ ಕರ್ನಾಟಕ ವಿಮೆನ್ಸ್ ಲೀಗ್ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.

ಸೋಮವಾರ ನಡೆದ ಹಣಾಹಣಿಯಲ್ಲಿ ಕಿಕ್ಸ್ಟಾರ್ಟ್ 8–1ರಿಂದ ಪರಿಕ್ರಮ ಎಫ್ಸಿ ತಂಡಕ್ಕೆ ಸೋಲುಣಿಸಿತು. ಕಾವ್ಯಾ 35, 45+2 ಮತ್ತು 48ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಸುಶ್ಮಿತಾ ಲೆಪ್ಚಾ (41, 54ನೇ ನಿಮಿಷ), ಸಬರಾ ಖಾತೂನ್ (11ನೇ ನಿಮಿಷ) ಮತ್ತು ಅರುಣಾ ಬಾಗ್ ಮಿಂಚಿದರು. ಎದುರಾಳಿ ತಂಡದ ಗುಡಿಯಾ ಕುಮಾರ್ (23ನೇ ನಿಮಿಷ) ‘ಉಡುಗೊರೆ ಗೋಲು’ ನೀಡಿದರು. ಪರಿಕ್ರಮ ಪರ ಸನಿಲಾ ಬಾಸುಮತಾರಿ 89ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ದಾಖಲಿಸಿದರು.

ಲಾಲ್ರಿನ್ಮುವಾನಿ ಗಳಿಸಿದ ಆರು ಗೋಲುಗಳು ಕೆಂಪ್ ಎಫ್ಸಿ ತಂಡದ ಅಮೋಘ ಗೆಲುವಿಗೆ ಕಾರಣವಾದವು. ಕೆಂಪ್ 10–2ರಿಂದ ಪಿಂಕ್ ಪ್ಯಾಂಥರ್ಸ್ ತಂಡವನ್ನು ಸೋಲಿಸಿತು.ಲಾಲ್ರಿನ್ಮುವಾನಿ 12, 24, 27, 81, 84, 90ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು. ಲಾಲ್ಬಿಯಾಕ್ ದಿಕಿ (6ನೇ ನಿ.), ಲಾಲ್ನುನ್ಸಿಯಾಮಿ (37ನೇ ನಿ.), ಜೈರೆಮ್ಮಾ ವಿ ಚಾಂಗ್ತು (78ನೇ ನಿ.), ಎಲಿಜಬೆತ್ ವನ್ಲಾಲ್ಮಾವಿ (88ನೇ ನಿ.) ವಿಜೇತ ತಂಡದ ಪರ ಗೋಲು ಗಳಿಸಿದರು. ಪಿಂಕ್ ಪ್ಯಾಂಥರ್ಸ್ ಪರ ಲವನಾ ಗೆಬೆಲ್ (71ನೇ ನಿ.) ಮತ್ತು ಅಲೀನಾ ಟೋನಿ (89ನೇ ನಿ.) ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.