ಬೆಂಗಳೂರು: ತಮ್ಮ ಆರು ವರ್ಷದ ಮಗಳು ಜೂಲಿಯೆಟಾ ಸಾವಿನ ವಿಷಯವನ್ನು 'ಕೇರಳ ಬ್ಲಾಸ್ಟರ್ಸ್' ಫುಟ್‌ಬಾಲ್ ತಂಡದ ಆಟಗಾರ ಆಡ್ರಿಯನ್ ಲೂನಾ ಬಹಿರಂಗಪಡಿಸಿದ್ದಾರೆ.

ಉರುಗ್ವೆ ಆಟಗಾರ ಲೂನಾ ದುಃಖದ ಸಂಗತಿಯನ್ನು ಇನ್‌ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ. ‘ಸಿಸ್ಟಿಕ್ ಫೈಬ್ರೋಸಿಸ್’ ಎಂಬ ಕಾಯಿಲೆಯಿಂದ ಜೂಲಿಯೆಟಾ ಏಪ್ರಿಲ್ 9 ರಂದು ನಿಧನರಾಗಿದ್ದರು ಎನ್ನಲಾಗಿದೆ.

ಕೇರಳ ಬ್ಲಾಸ್ಟರ್ಸ್ ಕಳೆದ ಋತುವಿನಲ್ಲಿ ಐಎಸ್‌ಎಲ್‌ನ ಫೈನಲ್‌ಗೆ ಪ್ರವೇಶಿಸುವಲ್ಲಿ 30ರ ಹರೆಯದ ಲೂನಾ ದೊಡ್ಡ ಪಾತ್ರ ವಹಿಸಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಕೇರಳ ಬ್ಲಾಸ್ಟರ್ಸ್, ‘ಆಡ್ರಿಯನ್ ಲೂನಾ ಮಗಳು ಜೂಲಿಯೆಟಾ ಅವರ ನಿಧನಕ್ಕೆ ಕ್ಲಬ್ ಸಂತಾಪ ವ್ಯಕ್ತಪಡಿಸುತ್ತದೆ. ಆಡ್ರಿಯನ್ ಮತ್ತು ಅವರ ಕುಟುಂಬಕ್ಕೆ ಈ ದುರಂತ ನೋವು ಸಹಿಸುವ ಪ್ರೀತಿ ಮತ್ತು ಶಕ್ತಿ ಸಿಗಲಿ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.