ದೋಹಾ: ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯ ಶ್ರೇಷ್ಠ ಆಟಗಾರನಿಗೆ ನೀಡುವ ‘ಗೋಲ್ಡನ್ ಬಾಲ್’ ಪ್ರಶಸ್ತಿಯನ್ನು ಶ್ರೇಷ್ಠ ಪ್ರದರ್ಶನದೊಂದಿಗೆ ಲಯೊನೆಲ್ ಮೆಸ್ಸಿ ತಮ್ಮದಾಗಿಸಿಕೊಂಡರು. ಈ ಮೂಲಕಮೆಸ್ಸಿ ಜಾಗತಿಕ ಫುಟ್ಬಾಲ್ ಇತಿಹಾಸದಲ್ಲಿ ಅಚ್ಚಳಿಯದಂತೆ ತಮ್ಮ ಹೆಸರನ್ನೊತ್ತಿದ್ದರು.

ಕತಾರ್ನಲ್ಲಿ ನಡೆದ ಈ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು ಏಳು ಗೋಲುಗಳನ್ನು ಮೆಸ್ಸಿ ಗಳಿಸಿದ್ದರು.

ಟೂರ್ನಿಯಲ್ಲಿ ಅತಿಹೆಚ್ಚು ಗೋಲು ಗಳಿಸಿದ ಆಟಗಾರನಿಗೆ ನೀಡುವ ‘ಗೋಲ್ಡನ್ ಬೂಟ್’ ಪ್ರಶಸ್ತಿಯನ್ನು ಫ್ರಾನ್ಸ್ ತಂಡದ ನಾಯಕ ಕಿಲಿಯನ್ ಎಂಬಾಪೆ ತಮ್ಮದಾಗಿಸಿಕೊಂಡರು. ಫೈನಲ್ನಲ್ಲಿ ಹ್ಯಾಟ್ರಿಕ್ ಸಾಧನೆಯೊಂದಿಗೆ ಅವರು ಒಟ್ಟು ಎಂಟು ಗೋಲುಗಳನ್ನು ಗಳಿಸಿದರು.

ಟೂರ್ನಿಯ ಅತ್ಯುತ್ತಮ ಗೋಲ್ಕೀಪರ್ಗೆ ನೀಡುವ ಗೋಲ್ಡನ್ ಗ್ಲೋವ್ ಪ್ರಶಸ್ತಿಗೆ ಅರ್ಜೆಂಟೀನಾದ ಎಮಿಲಿಯಾನೊ ಮಾರ್ಟಿನೆಜ್ ಪಾತ್ರರಾದರು. ಅರ್ಜೆಂಟೀನಾದವರೇ ಆದ 21 ವರ್ಷದ ಎಂಜೊ ಫೆರ್ನಾಂಡಿಜ್ ಅವರು ‘ಟೂರ್ನಿಯ ಉದಯೋನ್ಮುಖ ಯುವ ಆಟಗಾರ’ ಗೌರವ ತಮ್ಮದಾಗಿಸಿಕೊಂಡರು.

ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲಿ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಎರಡನೇ ಆಟಗಾರ ಎಂಬ ಗೌರವವನ್ನು ಕಿಲಿಯಾನ್ ಎಂಬಾಪೆ ಪಡೆದುಕೊಂಡರು.

ಅರ್ಜೆಂಟೀನಾ ಚಾಂಪಿಯನ್, ಕೊನೆಗೂ ನನಸಾದ ಮೆಸ್ಸಿ ಕನಸು: ಫ್ರಾನ್ಸ್ಗೆ ನಿರಾಸೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.