ಬೆಂಗಳೂರು: ಲಾಲ್‌ರಿನ್‌ಮುವಾನಿ ಗಳಿಸಿದ ಎರಡು ಗೋಲುಗಳ ಬಲದಿಂದ ಮಿಸಾಕ ಯುನೈಟೆಡ್ ಎಫ್‌ಸಿ ತಂಡ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಶ್ರಯದ ಮಹಿಳಾ ಲೀಗ್‌ನಲ್ಲಿ ಭರ್ಜರಿ ಜಯ ಗಳಿಸಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಈ ತಂಡ 2–1ರಲ್ಲಿ ಕಿಕ್‌ಸ್ಟಾರ್ಟ್ ಎಫ್‌ಸಿಯನ್ನು ಮಣಿಸಿತು. 19ನೇ ನಿಮಿಷದಲ್ಲಿ ಕಾವ್ಯ ಗಳಿಸಿದ ಗೋಲಿನೊಂದಿಗೆ ಕಿಕ್‌ಸ್ಟಾರ್ಟ್ ಮುನ್ನಡೆ ಸಾಧಿಸಿತು. ಮೊದಲಾರ್ಧದ ಮುಕ್ತಾಯದ ವರೆಗೂ ಈ ಮುನ್ನಡೆಯನ್ನು ಉಳಿಸಿಕೊಳ್ಳಲು ತಂಡ ಯಶಸ್ವಿಯಾಯಿತು. ಆದರೆ ಲಾಲ್‌ರಿನ್‌ಮುವಾನಿ 47 ಮತ್ತು 74ನೇ ನಿಮಿಷಗಳಲ್ಲಿ ಗೋಲು ಗಳಿಸಿ ಮಿಸಾಕ ತಂಡದ ಗೆಲುವಿಗೆ ಕಾರಣರಾದರು.

ಕಿಕ್ ಸ್ಟಾರ್ಟ್ ಎಫ್‌ಸಿ ಈಗಾಗಲೇ ಲೀಗ್‌ನ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಮಿಸಾಕ ರನ್ನರ್ ಅಪ್ ಆಗಿದೆ. ಟ್ರೋಫಿಗಾಗಿ ಎರಡು ಲೆಗ್‌ಗಳ ಪಂದ್ಯವನ್ನು ಏರ್ಪಡಿಸಲಾಗಿದೆ. ಎರಡನೇ ಲೆಗ್ ಪಂದ್ಯ ಇದೇ 24ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.