ಬ್ಯಾಂಬೊಲಿಮ್: ಆ್ಯಡಂ ಲೆ ಫಾಂಡ್ರೆ ಹಾಗೂ ಹ್ಯುಗೊ ಬೊಮೌಸ್ ಅವರ ಕಾಲ್ಚಳಕದ ಬಲದಿಂದ ಮುಂಬೈ ಸಿಟಿ ಎಫ್ಸಿ ಮಿನುಗಿತು. ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ 2–0ಯಿಂದ ಕೇರಳ ಬ್ಲಾಸ್ಟರ್ಸ್ ಎದುರು ಗೆದ್ದು ಬೀಗಿತು.

ಈ ಜಯದೊಂದಿಗೆ ಮುಂಬೈ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಆರಂಭದಿಂದಲೇ ಉತ್ತಮ ಆಟವಾಡಿದ ಮುಂಬೈಗೆ ಮೂರನೇ ನಿಮಿಷದಲ್ಲೇ ಪೆನಾಲ್ಟಿ ಅವಕಾಶ ದೊರೆಯಿತು. ಗೋಲು ಗಳಿಸಿದ ಫಾಂಡ್ರೆ ತಂಡಕ್ಕೆ ಮುನ್ನಡೆ ದೊರಕಿಸಿಕೊಟ್ಟರು.

ಇನ್ನೊಂದು ಗೋಲು ಪ್ರಥಮಾರ್ಧದಲ್ಲೇ ದಾಖಲಾಯಿತು. 11ನೇ ನಿಮಿಷದಲ್ಲಿ ಅಹ್ಮದ್ ಜಹೊ ನೆರವು ಪಡೆದ ಹ್ಯುಗೊ ಬೊಮೌಸ್ ಸೊಗಸಾದ ಗೋಲು ಹೊಡೆದರು.

ಗೋಲು ಗಳಿಸುವ ಕೆಲವು ಅವಕಾಶಗಳನ್ನು ಕೇರಳ ಬ್ಲಾಸ್ಟರ್ಸ್ ಆಟಗಾರರು ಕೈಚೆಲ್ಲಿದರು.

72ನೇ ನಿಮಿಷದಲ್ಲಿ ಪೆನಾಲ್ಟಿ ಅವಕಾಶವೊಂದನ್ನು ಮುಂಬೈ ಸಿಟಿ ಕಳೆದುಕೊಂಡಿತು. ಕೇರಳ ತಂಡದ ಅಲ್ಬಿನೊ ಗೋಮ್ಸ್ ಅದ್ಭುತವಾಗಿ ಚೆಂಡನ್ನು ತಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.