ಗುವಾಹಟಿ: ಆತಿಥೇಯ ನಾರ್ತ್ ಈಸ್ಟ್ ಯುನೈಟೆಡ್ ತಂಡ, ಐಎಸ್ಎಲ್ ಫುಟ್ಬಾಲ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಶನಿವಾರ ಒಡಿಶಾ ಎಫ್.ಸಿ. ತಂಡವನ್ನು2-1 ಗೋಲುಗಳಿಂದ ಸೋಲಿಸಿತು.

ಇಂದಿರಾ ಗಾಂಧಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಮದ ವೇಳೆ ನಾರ್ತ್ ಈಸ್ಟ್ ತಂಡ 1–0 ಗೋಲಿನಿಂದ ಮುಂದಿತ್ತು. ಪಂದ್ಯದ ಎರಡನೇ ನಿಮಿಷವೇ ರೆಡೀಮ್ ತ್ಲಾಂಗ್, ಪನಾಗಿಯೊಟಿಸ್ ಟ್ರಿಯಾಡಿಸ್ ಪಾಸ್ನಲ್ಲಿ ಚೆಂಡನ್ನು ಗುರಿತಲುಪಿಸಿ ತವರಿನ ಪ್ರೇಕ್ಷಕರಲ್ಲಿ ಸಂಭ್ರಮ ಮೂಡಿಸಿದರು.

ಸ್ಪೇನ್ ದೇಶದ ಕ್ಸಿಸ್ಕೊ ಹರ್ನಾಂಡಿಸ್ ಮಾರ್ಕೋಸ್ ಪಂದ್ಯದ 71ನೇ ನಿಮಿಷ ಒಡಿಶಾ ತಂಡ ಸ್ಕೋರ್ ಸಮ ಮಾಡಿಕೊಳ್ಳಲು ನೆರವಾದರು. 85ನೇ ನಿಮಿಷ ಅಸಮೋವಾ ಗ್ಯಾನ್ ನಾರ್ತ್ಈಸ್ಟ್ ತಂಡಕ್ಕೆ ನಿರ್ಣಾಯಕ ಗೋಲು ಗಳಿಸಿಕೊಟ್ಟರು. ಇದು ಘಾನಾ ದೇಶದ ಆಟಗಾರ ಐಎಸ್ಎಲ್ನಲ್ಲಿ ಗಳಿಸಿದ ಮೊದಲ ಗೋಲು ಎನಿಸಿತು.

72ನೇ ನಿಮಿಷ ಮ್ಯಾಕ್ಸಿಮಿಲಿಯಾನೊ ಬರೀರೊ ಅವರ ಮೊಣಕಾಲಿಗೆ ಒರಟಾದ ರೀತಿ ಬೂಟು ತಾಗಿಸಿದ ಕಾರಣ ಒಡಿಶಾ ತಂಡದ ಕಾರ್ಲೋಸ್ ಡೆಲ್ಗಾಡೊ ಅವರಿಗೆ ರೆಫ್ರಿ ‘ರೆಡ್ ಕಾರ್ಡ್’ ತೋರಿಸಿಹೊರಕಳುಹಿಸಿದರು.

ಒಡಿಶಾ ತಂಡ ಮೊದಲ ಪಂದ್ಯದಲ್ಲಿ ಜೆಮ್ಶೆಡಪುರ ಎಫ್ಸಿ ಎದುರು ಸೋಲನುಭವಿಸಿದರೆ, ನಾರ್ತ್ ಈಸ್ಟ್ ತಂಡ ತನ್ನ ಮೊದಲ ಪಂದ್ಯದಲ್ಲಿ ಬಿಎಫ್ಸಿ ಜೊತೆ ಗೋಲಿಲ್ಲದೇ ಡ್ರಾ ಮಾಡಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.