ನವದೆಹಲಿ: ಸ್ಪೇನ್ನ ಮನೊಲೊ ಮಾರ್ಕ್ವೆಝ್ ಅವರು ಭಾರತ ಪುರುಷರ ಫುಟ್ಬಾಲ್ ತಂಡದ ನೂತನ ಹೆಡ್ ಕೋಚ್ ಆಗಿ ಶನಿವಾರ ನೇಮಕಗೊಂಡಿದ್ದಾರೆ. ಮುಖ್ಯ ಕೋಚ್ ಸ್ಥಾನದಿಂದ ವಜಾಗೊಂಡಿದ್ದ ಇಗೊರ್ ಸ್ಟಿಮಾಚ್ ಅವರ ಸ್ಥಾನಕ್ಕೆ ಮಾರ್ಕ್ವೆಝ್ ಅವರ ನೇಮಕವಾಗಿದೆ.

ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ನ (ಎಐಎಫ್ಎಫ್) ಕಾರ್ಯಕಾರಿ ಸಮಿತಿ ಶನಿವಾರ ಇಲ್ಲಿ ಸಭೆ ಸೇರಿ ಮಾರ್ಕ್ವೆಝ್ ಅವರ ನೇಮಕ ಪ್ರಕಟಿಸಿತು. 55 ವರ್ಷದ ಮಾರ್ಕ್ವೆಝ್ ಪ್ರಸ್ತುತ ಐಎಸ್ಎಲ್ ತಂಡ ಎಫ್ಸಿ ಗೋವಾದ ಮುಖ್ಯ ಕೋಚ್ ಆಗಿದ್ದಾರೆ.

ಸಮಿತಿಯು, ಭಾರತ ಸೀನಿಯರ್ ರಾಷ್ಟ್ರೀಯ ತಂಡಕ್ಕೆ ನೂತನ ಹೆಡ್ ಕೋಚ್ ನೇಮಕದ ಬಗ್ಗೆ ಸಮಾಲೋಚನೆ ನಡೆಸಿತು. ಮನೊಲೊ ಮಾರ್ಕ್ವೆಝ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹೆಡ್ ಕೋಚ್ ಆಗಿ ಆಯ್ಕೆ ಮಾಡಿತು ಎಂದು ಎಐಎಫ್ಎಫ್ ಹೇಳಿಕೆಯಲ್ಲಿ ತಿಳಿಸಿದೆ.

‘2024–25ನೇ ಸಾಲಿಗೆ ಮಾರ್ಕ್ವೆಝ್ ಅವರು ಎಫ್ಸಿ ಗೋವಾ ಮುಖ್ಯ ಕೋಚ್ ಪಾತ್ರದಲ್ಲಿ ಮುಂದುವರಿಯಲಿದ್ದಾರೆ. ಜೊತೆಗೆ ಎರಡೂ ಹೊಣೆಗಳನ್ನು ನಿಭಾಯಿಸಲಿದ್ದಾರೆ. ನಂತರದ ಸಾಲಿನಲ್ಲಿ ಪೂರ್ಣಪ್ರಮಾಣದಲ್ಲಿ ರಾಷ್ಟ್ರೀಯ ಹೆಡ್ ಕೋಚ್ ಹೊಣೆ ವಹಿಸಲಿದ್ದಾರೆ’ ಎಂದು ತಿಳಿಸಿದೆ. ಮಾರ್ಕ್ವೆಝ್ ಅವರ ಅವಧಿಯನ್ನು ಬಹಿರಂಗಪಡಿಸಿಲ್ಲ.

2026ರ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ಮೂರನೇ ಸುತ್ತಿಗೇರಲು ಭಾರತ ತಂಡ ವಿಫಲವಾದ ನಂತರ ಜೂನ್ 17ರಂದು ಸ್ಟಿಮ್ಯಾಚ್ ಅವರನ್ನು ಮುಖ್ಯ ಕೋಚ್ ಸ್ಥಾನದಿಂದ ಕಿತ್ತುಹಾಕಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.