ಬೆಂಗಳೂರು: ಹ್ಯಾಟ್ರಿಕ್ ಗೋಲು ಗಳಿಸಿದ ಆಶಿಕ್ ಅವರ ಮಿಂಚಿನ ಆಟದ ನೆರವಿನಿಂದ ಎಫ್ಸಿ ಡೆಕ್ಕನ್ ತಂಡ ರಾಜ್ಯ ಫುಟ್ಬಾಲ್ ಸಂಸ್ಥೆ ಆಯೋಜಿಸಿರುವ ಸೂಪರ್ ಡಿವಿಷನ್ ಲೀಗ್ನಲ್ಲಿ ಸೋಮವಾರ ಭರ್ಜರಿ ಜಯ ಗಳಿಸಿತು. ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇನ್ಕಂ ಟ್ಯಾಕ್ ತಂಡವನ್ನು ಡೆಕ್ಕನ್ 11–0ಯಿಂದ ಮಣಿಸಿತು.

ನಾಲ್ಕನೇ ನಿಮಿಷದಲ್ಲಿ ಶೆರ್ವಿನ್ ಡಿ ಗಳಿಸಿದ ಗೋಲಿನ ಮೂಲಕ ಮುನ್ನಡೆ ಸಾಧಿಸಿದ ಡೆಕ್ಕನ್ ನಂತರ ಎದುರಾಳಿ ತಂಡವನ್ನು ನಿರಂತರ ಕಾಡಿತು. ಆಶಿಕ್ ಎ.ಎಸ್ 16, 29 ಮತ್ತು 50ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಸೂರ್ಯ ಯು.ಕೆ (14ನೇ ನಿಮಿಷ), ಶ್ರೀಜೇಶ್ (25, 45ನೇ ನಿ), ಅಖಿಲ್ (43ನೇ ನಿ), ಸೈಯದ್ ಅಹಮ್ಮದ್ (64, 85ನೇ ನಿ) ಮತ್ತು ಸ್ಟ್ಯಾಲಿನ್ ಡ್ಯಾನಿಯಲ್ (84ನೇ ನಿ) ಇತರ ಗೋಲು ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಸ್ಟೂಡೆಂಟ್ಸ್ ಯೂನಿಯರ್ ಎಫ್ಸಿ 3–2ರಲ್ಲಿ ಯಂಗ್ ಚಾಲೆಂಜರ್ಸ್ ಎಫ್ಸಿಯನ್ನು ಮಣಿಸಿತು. ಸ್ಟೂಡೆಂಟ್ಸ್ ಯೂನಿಯರ್ ಪರ ವಿಘ್ನೇಶ್ ಶ್ರೀನಿವಾಸ್ (44ನೇ ನಿ) ಮತ್ತು ಮುರಳಿ ಶ್ರೀನಿವಾಸ್ (72, 76ನೇ ನಿ) ಗೋಲು ಗಳಿಸಿದರೆ ಯಂಗ್ ಚಾಲೆಂಜರ್ಸ್ ಪರ ಪ್ರಥಮೇಶ್ ಮುರಗೋಡ (35ನೇ ನಿ) ಮತ್ತು ನಿಹಾಲ್ ಕೊಲ್ಯಾಕೊ (82ನೇ ನಿ) ಚೆಂಡನ್ನು ಗುರಿ ಸೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.