ನವದೆಹಲಿ: ಭಾರತ ಆಯೋಜಿಸುತ್ತಿರುವ ಮಹಿಳೆಯರ ಫಿಫಾ (17 ವರ್ಷದೊಳಗಿನವರು)ವಿಶ್ವಕಪ್ ಫುಟ್‌ಬಾಲ್ ಟೂರ್ನಿ 2020ರ ನವೆಂಬರ್ 2ರಿಂದ 21ರವರೆಗೆ ನಡೆಯಲಿದೆ.

ದೇಶದಾದ್ಯಂತ ನಾಲ್ಕು ನಗರಗಳಲ್ಲಿ ಟೂರ್ನಿ ನಡೆಯಲಿದೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣವನ್ನುಟೂರ್ನಿ ನಡೆಯುವ ಸ್ಥಳವಾಗಿ ತಾತ್ಕಾಲಿಕವಾಗಿ ಆಯ್ಕೆ ಮಾಡಲಾಗಿದೆ. ಇದಕ್ಕೆ ಅಂತರರಾಷ್ಟ್ರೀಯ ಫುಟ್‌ಬಾಲ್ ಒಕ್ಕೂಟ ಸಂಸ್ಥೆಯ (ಫಿಫಾ) ಅನುಮೋದನೆ ಬಾಕಿಯಿದೆ.

ಕೋಲ್ಕತ್ತ, ನವೀ ಮುಂಬೈ, ಗೋವಾ ಹಾಗೂ ಅಹಮದಾಬಾದ್ ನಗರಗಳೂ ಪಂದ್ಯಗಳ ಆತಿಥ್ಯ ವಹಿಸಲು ಸ್ಪರ್ಧೆಯಲ್ಲಿವೆ. ಈ ವರ್ಷದ ಮಾರ್ಚ್‌ನಲ್ಲಿ ಭಾರತವನ್ನು ಟೂರ್ನಿಯ ಆತಿಥೇಯ ದೇಶವಾಗಿ ಘೋಷಿಸಲಾಗಿತ್ತು. ಎರಡು ವರ್ಷಗಳಿಗೊಮ್ಮೆ ನಡೆಯುವ ಟೂರ್ನಿಯಲ್ಲಿ 2018ರಲ್ಲಿ ಸ್ಪೇನ್ ಚಾಂಪಿಯನ್ ಆಗಿತ್ತು.

ಆತಿಥೇಯ ರಾಷ್ಟ್ರವಾಗಿ ಭಾರತ ಸ್ವಯಂ ಅರ್ಹತೆ ಪಡೆದಿದೆ. ಹೀಗಾಗಿ ಇದೇ 15ರಿಂದ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಏಷ್ಯನ್ ಅರ್ಹತಾ ಎಎಫ್‌ಸಿ 16 ವರ್ಷದೊಳಗಿನವರ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಅದು ಪಾಲ್ಗೊಳ್ಳುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.