ಮಾಂಟೆವಿಡಿಯೊ: ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡಕ್ಕೆ ಫುಟ್ಬಾಲ್ ವಿಶ್ವಕಪ್ ಕ್ವಾಲಿಫೈಯರ್ಸ್ ಪಂದ್ಯದಲ್ಲಿ ಉರುಗ್ವೆ ತಂಡವು ಆಘಾತ ನೀಡಿತು. ಮತ್ತೊಂದು ಪಂದ್ಯದಲ್ಲಿ ಕೊಲಂಬಿಯಾ ತಂಡವು ಪ್ರಬಲ ಬ್ರೆಜಿಲ್ ವಿರುದ್ಧ ಅಚ್ಚರಿಯ ಗೆಲುವು ಸಾಧಿಸಿತು.

ಅರ್ಜೆಂಟೀನಾದ ಬ್ಯೂನಸ್ ಐರಿಸ್ನಲ್ಲಿರುವ ಬೊಂಬೊನೆರಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಉರುಗ್ವೆ 2– 0 ಯಿಂದ ಗೆಲುವು ಸಾಧಿಸಿತು. ಈ ಮೂಲಕ ಲಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಸತತ 14 ಪಂದ್ಯಗಳ ಗೆಲುವಿನ ಅಭಿಯಾನವನ್ನು ಕೊನೆಗೊಳಿಸಿತು.

41ನೇ ನಿಮಿಷದಲ್ಲಿ ಡಿಫೆಂಡರ್ ರೊನಾಲ್ಡ್ ಅರೌಜೊ ಅವರು ಉರುಗ್ವೆ ತಂಡಕ್ಕೆ ಮುನ್ನಡೆ ಒದಗಿಸಿದರು. 87ನೇ ನಿಮಿಷದಲ್ಲಿ ಡಾರ್ವಿನ್ ನುನೆಜ್ ಚೆಂಡನ್ನು ಗುರಿ ಸೇರಿಸುವ ಮೂಲಕ ಉರುಗ್ವೆಯ ಗೆಲುವಿನ ಅಂತರವನ್ನು ಹೆಚ್ಚಿಸಿದರು.

2026ರ ವಿಶ್ವಕಪ್ ಕ್ವಾಲಿಫೈಯರ್ನಲ್ಲಿ ಆತಿಥೇಯ ಅರ್ಜೆಂಟೀನಾ ತಂಡಕ್ಕೆ ಇದು ಮೊದಲ ಸೋಲಾಗಿದೆ. 2022ರ ವಿಶ್ವಕಪ್ನ ಗುಂಪು ಹಂತದ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ 1–2 ರಿಂದ ಕೊನೆಯ ಬಾರಿ ಚಾಂಪಿಯನ್ ತಂಡ ಪರಾಭವಗೊಂಡಿತ್ತು. ನಂತರ ಸತತ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು.

ಮತ್ತೊಂದು ಪಂದ್ಯದಲ್ಲಿ ಲೂಯಿಸ್ ಡಿಯಾಜ್ ಅವರ ಅಮೋಘ ಆಟದ ನೆರವಿನಿಂದ ಕೊಲಂಬಿಯಾ ತಂಡವು 2–1ಯಿಂದ ಬ್ರೆಜಿಲ್ ತಂಡವನ್ನು ಮಣಿಸಿತು. ಪಂದ್ಯ ಆರಂಭಗೊಂಡ 4ನೇ ನಿಮಿಷದಲ್ಲಿ ಗೇಬ್ರಿಯಲ್ ಮಾರ್ಟಿನೆಲ್ಲಿ ಬ್ರೆಜಿಲ್ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಆದರೆ, ಲೂಯಿಸ್ (75, 79ನೇ) ಐದು ನಿಮಿಷಗಳ ಅಂತರದಲ್ಲಿ ಎರಡು ಗೋಲು ಗಳಿಸಿ ಕೊಲಂಬಿಯಾ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದಿರುವ ಅರ್ಜೆಂಟೀನಾ 12 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮೂರು ಗೆಲುವು, ಒಂದು ಡ್ರಾ ಮತ್ತು ಒಂದು ಸೋಲಿನೊಂದಿಗೆ ಉರುಗ್ವೆ (10 ಅಂಕ) ಎರಡನೇ ಸ್ಥಾನದಲ್ಲಿದೆ. ಕೊಲಂಬಿಯಾ (9 ಅಂಕ) ಮತ್ತು ಬ್ರೆಜಿಲ್ (7 ಅಂಕ) ಕ್ರಮವಾಗಿ ಮೂರು ಮತ್ತು ಐದನೇ ಸ್ಥಾನದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.