ಬೆಂಗಳೂರು: ಯಂಗ್ ಬ್ಲೂಸ್ ಎಲೀಟ್ ಎಫ್‌ಸಿ ತಂಡವು ಕೆಎಸ್‌ಎಫ್‌ಎ ಮಹಿಳಾ ‘ಬಿ’ ಡಿವಿಷನ್ ಪುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಶುಕ್ರವಾರ ನಡೆದ ಅಂತಿಮ ಪಂದ್ಯದಲ್ಲಿ ಯಂಗ್ ಬ್ಲೂಸ್ ತಂಡವು 3–0 ಯಿಂದ ಆಫ್‌ಸೈಡ್ ಟ್ರ್ಯಾಪ್ ಎಫ್‌ಸಿ ತಂಡವನ್ನು ಮಣಿಸಿತು. ಯಂಗ್ ಪರ ತಿಯಾ ಝಮೊರಾ ಫರ್ನಾಂಡಿಸ್ (6ನೇ ಮತ್ತು 8ನೇ ನಿಮಿಷ) ಮತ್ತು ಶನಯಾ ಮ್ಯಾಕ್ಸನ್ ಡಿಕುನ್ಹ (15ನೇ ನಿ) ಗೋಲು ಗಳಿಸಿದರು.
ಯಂಗ್ ಬ್ಲೂಸ್ ಮತ್ತು ರನ್ನರ್ಸ್ ಅಪ್ ಆಫ್‌ಸೈಡ್ ಟ್ರ್ಯಾಪ್ ತಂಡಗಳು ಕೆಎಸ್‌ಎಫ್‌ಎ ಮಹಿಳಾ ‘ಎ’ ಡಿವಿಷನ್‌ಗೆ ಬಡ್ತಿ ಪಡೆದವು.