ನ್ಯೂಪೋರ್ಟ್, ಅಮೆರಿಕ (ಪಿಟಿಐ): ಭಾರತದ ಟೆನಿಸ್ ದಿಗ್ಗಜರಾದ ವಿಜಯ್ ಅಮೃತರಾಜ್ ಮತ್ತು ಲಿಯಾಂಡರ್ ಪೇಸ್ ಅವರಿಗೆ ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ ಗೌರವ ನೀಡಲಾಗಿದೆ. ಈ ಗೌರವಕ್ಕೆ ಪಾತ್ರರಾದ ಏಷ್ಯಾದ ಮೊದಲ ಟೆನಿಸ್ ಆಟಗಾರರು ಅವರಾಗಿದ್ದಾರೆ.

‘ಪೇಸ್ ಅವರನ್ನು ಆಟಗಾರರ ವಿಭಾಗದಲ್ಲಿ, ಅಮೃತರಾಜ್ ಅವರನ್ನು ಟೆನಿಸ್ಗೆ ನೀಡಿದ ಗಣನೀಯ ಕೊಡುಗೆಗಾಗಿ ‘ಕಾಂಟ್ರಿಬ್ಯೂಟರ್ ಕೆಟಗರಿ’ಯಲ್ಲಿ ಆಯ್ಕೆ ಮಾಡಲಾಗಿದೆ. ದೂರದೃಷ್ಟಿ ಹೊಂದಿದ ಮತ್ತು ಆಟವನ್ನು ಪ್ರಭಾವಿಸಿದ ಆಟಗಾರರನ್ನು ಗೌರವಿಸುತ್ತಿದ್ದೇವೆ. ಇವರ ಸೇರ್ಪಡೆಯಿಂದ ಹಾಲ್ ಆಫ್ ಫೇಮ್ ಅನ್ನು 28 ರಾಷ್ಟ್ರಗಳ 267 ಆಟಗಾರರು ಪ್ರತಿನಿಧಿಸಿದಂತಾಗಿದೆ’ ಎಂದು ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ ಪ್ರಕಟಣೆ ತಿಳಿಸಿದೆ.

ಅಮೃತರಾಜ್ ಅವರೊಂದಿಗೆ ರಿಚರ್ಡ್ ಇವಾನ್ಸ್ ಅವರಿಗೂ ಹಾಲ್ ಆಫ್ ಫೇಮ್ ಗೌರವ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.