ಗ್ವಾಡಲಾಜರಾ, ಮೆಕ್ಸಿಕೊ (ಎಪಿ): ಎಸ್ತೊನಿಯಾದ ಅನೆಟ್ ಕೊಂಥಾವೀಟ್ ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಫೈನಲ್ ಟೆನಿಸ್ ಟೂರ್ನಿಯ ಸೆಮಿಫೈನಲ್ ಸ್ಥಾನ ಖಚಿತಪಡಿಸಿಕೊಂಡರು.

ಶುಕ್ರವಾರ ನಡೆದ ಪಂದ್ಯದಲ್ಲಿ 25 ವರ್ಷದ ಅನೆಟ್ 6–4, 6–0ಯಿಂದ ಜೆಕ್ ಗಣರಾಜ್ಯದ ಕೆರೊಲಿನಾ ಪ್ಲಿಸ್ಕೋವಾ ವಿರುದ್ಧ ಜಯಿಸಿದರು. ಇದರೊಂದಿಗೆ 12ನೇ ಜಯ ದಾಖಲಿಸಿದರು. ಅನೆಟ್ ಅವರು ತಾವು ಆಡಿದ ಕಳೆದ 30 ಪಂದ್ಯಗಳಲ್ಲಿ ಪೈಕಿ 28ರಲ್ಲಿ ಜಯಿಸಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಸ್ಪೇನ್‌ನ ಗಾರ್ಬೈನ್ ಮುಗುರುಜಾ 2–6, 6–3, 6–4ರಿಂದ ಬಾರ್ಬೊರಾ ಕ್ರೆಜಿಕೊವಾ ವಿರುದ್ಧ ಜಯಗಳಿಸಿದರು. ಅದರೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿದರು.

ಡಬಲ್ಸ್‌ನಲ್ಲಿ ಶುಕೊ ಅಯೊಮಾ ಮತ್ತು ಎನಾ ಶಿಬಿರಾ 6–4, 7–6 (5) ಅವರು ನಿಕೊಲ್ ಮೆಲಿಚಾರ್ ಮಾರ್ಟಿನೇಜ್ ಮತ್ತು ಡೆಮಿ ಶುರ್ಸ್ ವಿರುದ್ಧ ಜಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.