ನವದೆಹಲಿ: ಕೊನೆಯ ದಿನವೂ ಆಧಿಪತ್ಯ ಮುಂದುವರಿಸಿದ ಭಾರತದ ಶೂಟರ್ಗಳು ಏಷ್ಯನ್ ಏರ್ಗನ್ ಚಾಂಪಿಯನ್ಷಿಪ್ನಲ್ಲಿ ಒಟ್ಟು 25 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚೀನಾ ತೈಪೆಯ ಟಯಾನ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತ ಸೋಮವಾರ ಐದು ಚಿನ್ನ ಗೆದ್ದಿತು. ಇದರೊಂದಿಗೆ ತಂಡದ ಒಟ್ಟು ಸಾಧನೆ 16 ಚಿನ್ನ, ಐದು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕ ತನ್ನದಾಗಿಸಿಕೊಂಡಿತು.

ಯಶ್ ವರ್ಧನ್ ಮತ್ತು ಶ್ರೇಯಾ ಅಗರವಾಲ್ ಸೋಮವಾರ ಅಪೂರ್ವ ಸಾಮರ್ಥ್ಯ ತೋರಿದರು. ಜೂನಿಯರ್ ಪುರುಷರ 10 ಮೀಟರ್ಸ್ ಏರ್ ರೈಫಲ್ ವಿಭಾಗದಲ್ಲಿ ಯಶ್ ವರ್ಧನ್ ಚಿನ್ನ ಗೆದ್ದರು. ನಂತರ ಕೇವಲ್ ಪ್ರಜಾಪತಿ ಮತ್ತು ಐಶ್ವರ್ಯಾ ತೋಮರ್ ಜೊತೆಗೂಡಿ ತಂಡ ವಿಭಾಗಗಳಲ್ಲಿ ಚಿನ್ನ ಗಳಿಸಿದರು.

ಜೂನಿಯರ್ ಮಹಿಳೆಯರ 10 ಮೀಟರ್ಸ್ ಏರ್ ರೈಫಲ್ ವಿಭಾಗದಲ್ಲಿ ಶ್ರೇಯಾ ಚಿನ್ನಕ್ಕೆ ಗುರಿ ಇರಿಸಿದರು. ನಂತರ ಮೇಹುಲಿ ಘೋಷ್ ಮತ್ತು ಕವಿ ಚಕ್ರವರ್ತಿ ಜೊತೆಗೆ ತಂಡ ವಿಭಾಗಗಳಲ್ಲೂ ಮೊದಲಿಗರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.