ಹಾಂಗ್‌ಝೌ: ಈ ಬಾರಿಯ ಏಷ್ಯನ್ ಕ್ರೀಡಾಕೂಟದ ಸ್ಪೀಡ್ ಸ್ಕೇಟಿಂಗ್ ತಂಡ ವಿಭಾಗದ 3000ಮೀ ರಿಲೇ ಸ್ಪರ್ಧೆಯಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಸೋಮವಾರ ಕಂಚಿನ ಪದಕ ಗೆದ್ದುಕೊಂಡಿವೆ.

ಸಂಜನಾ ಬಥುಲಾ, ಕಾರ್ತಿಕಾ ಜಗದೀಶ್ವರನ್, ಹೀರಲ್ ಸಾಧು, ಆರತಿ ಕಸ್ತೂರಿರಾಜ್ ಅವರನ್ನೊಳಗೊಂಡ ಮಹಿಳಾ ತಂಡ 4 ನಿಮಿಷ 34.86 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಪೂರ್ಣಗೊಳಿಸಿ ಪದಕ ಗೆದ್ದಿತು.

ಚೈನೀಸ್ ತೈಪೇಯಿ ಚಿನ್ನ (4 ನಿಮಿಷ 19.44 ಸೆಕೆಂಡ್) ಹಾಗೂ ದಕ್ಷಿಣ ಕೊರಿಯಾ ಪಡೆ ಬೆಳ್ಳಿ (4 ನಿಮಿಷ 21.14 ಸೆಕೆಂಡ್) ಪದಕಕ್ಕೆ ಕೊರಳೊಡ್ಡಿದವು.

ಅರಿಯನ್‌ಪಾಲ್ ಸಿಂಗ್ ಗುಮಾನ್, ಆನಂದ್‌ಕುಮಾರ್ ವೇಲ್‌ಕುಮಾರ್, ಸಿದ್ಧಾಂತ್ ಕಾಂಬ್ಳೆ ಹಾಗೂ ವಿಕ್ರಮ್ ಇಂಗಳೆ ಅವರನ್ನೊಳಗೊಂಡ ಪುರುಷರ ತಂಡ 4 ನಿಮಿಷ 10.12 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿತು.

ಚೈನೀಸ್ ತೈಪೇಯಿ (4 ನಿಮಿಷ 05.69 ಸೆಕೆಂಡ್) ಹಾಗೂ ದಕ್ಷಿಣ ಕೊರಿಯಾ (4 ನಿಮಿಷ 05.70 ಸೆಕೆಂಡ್) ತಂಡಗಳೇ ಪುರುಷರ ವಿಭಾಗದಲ್ಲಿಯೂ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.