ನವದಹಲಿ:ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್‌ನ ಮಹಿಳೆಯರ 53 ಕೆಜಿ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತದ ವಿನೇಶ್‌ಪೋಗಟ್ ಅವರು ಜಪಾನ್‌ನ ಮಯು ಮುಕೈಡಾ ಎದುರು ಸೋಲುಕಂಡರು.

ನವದೆಹಲಿಯಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿಪೋಗಟ್ ಚಿನ್ನದ ಪದಕ ಗೆಲ್ಲುವ ಅವಕಾಶ ತಪ‍್ಪಿಸಿಕೊಂಡರೂ,ಕಂಚಿನ ಪದಕ ಜಯಿಸುವ ಅವಕಾಶ ಇದೆ. ಅದಕ್ಕಾಗಿ ಅವರು ವಿಯೆಟ್ನಾಂನ ಥಿ ಲಿ ಕಿಯು ಎದುರು ಸೆಣಸಬೇಕಿದೆ.ಪೋಗಟ್‌ಗೆಮುಕೈಡಾ ವಿರುದ್ಧ ಎದುರಾದ ಸತತ ಮೂರನೇ ಸೋಲು ಇದಾಗಿದೆ. 2019ರ ವಿಶ್ವ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ನಲ್ಲೂ ಸೋಲುಕಂಡಿದ್ದರು.

ರಿಯೊ ಒಲಿಂಪಿಕ್‌ನ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು 65 ಕೆಜಿ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ. ಕೆ.ಡಿ ಜಾಧವ್ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ನಲ್ಲಿ,ಇಂದು ಚಿನ್ನದ ಪದಕಕ್ಕಾಗಿ ಸೆಣಸಲಿರುವ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ.

57 ಕೆಜಿ ವಿಭಾಗದಲ್ಲಿ ಜಪಾನ್‌ನ ರಿಸಾಕೊ ಕವಾಯ್ ಅವರೆದುರು ಅನ್ಷು ಸೆಮಿಫೈನಲ್‌ನಲ್ಲಿ ಸೋಲು ಕಂಡಿದ್ದಾರೆ. ಕಂಚಿನ ಪದಕ್ಕಾಗಿ ಅವರು ಉಜ್ಬೇಕಿಸ್ತಾನದ ಸೆವರಾ ಎಷ್ಮುರತೊವಾ ಎದುರು ಸೆಣಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.