ಬೆಂಗಳೂರು: ಕುದುರೆ ರೇಸ್ನ ಖ್ಯಾತನಾಮ ಟ್ರೇನರ್ ರಶೀದ್ ಆರ್ ಬೈರಾಮ್ಜಿ (88) ಶನಿವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು.

ವಿಶ್ವದ ಪ್ರತಿಷ್ಠಿತ ರೇಸ್ ಕೇಂದ್ರಗಳಲ್ಲಿ ಕುದುರೆಗಳನ್ನು ತರಬೇತುಗೊಳಿಸಿದ ಹೆಗ್ಗಳಿಕೆ ಬೈರಾಮ್ಜಿಯವರದ್ದು. ಅವರ ದಾಖಲೆಗಳಿಗೆ ಅವರೇ ಸರಿಸಾಟಿ.

3200 ವಿಜಯಗಳು ಅವರ ಹೆಸರಲ್ಲಿವೆ. ಅದರಲ್ಲಿ 230 ಕ್ಲಾಸಿಕ್ , 10 ಇಂಡಿಯನ್ ಡರ್ಬಿ ಮತ್ತು 12 ಆಹ್ವಾನಿತ ಕಪ್ ಗೆಲುವುಗಳು ಸೇರಿವೆ.

ಅವರು ಜನಿಸಿದ್ದು ಟ್ರೇನರ್ಗಳ ಕುಟುಂಬದಲ್ಲಿಯೇ. ತಮ್ಮ ಅಜ್ಜ ಬೈರಾಮ್ಜಿ ರುಸ್ತುಮಜಿ ಅವರು ಕುದುರೆಗಳನ್ನು ತರಬೇತುಗೊಳಿಸುವುದನ್ನು ಬಾಲ್ಯದಲ್ಲಿಯೇ ನೋಡಿ ಆಕರ್ಷಿತರಾದರು. ಅವರ ತಂದೆ ರುಸ್ತುಮಜಿ ಬೈರಾಮ್ಜಿ ಕೂಡ ಟ್ರೇನರ್ ಆಗಿದ್ದರು. 1955ರ ಮೇ 1ರಂದು ಪುಣೆಯಲ್ಲಿ ಟ್ರೇನರ್ ಲೈಸೆನ್ಸ್ ಪಡೆದರು. ಆಗ ಸೈರಸ್ ಪೂನಾವಾಲಾ ನೀಡಿದ ನಾಲ್ಕು ಕುದುರೆಗಳ ತರಬೇತಿಯೊಂದಿಗೆ ಅವರ ವೃತ್ತಿಜೀವನ ಆರಂಭವಾಯಿತು.

21ನೇ ವಯಸ್ಸಿನಿಂದಲೇ ಯಶಸ್ಸಿನ ಒಂದೊಂದೇ ಮೆಟ್ಟಿಲು ಹತ್ತಿದರು. ಭಾರತದ ರೇಸಿಂಗ್ ವಲಯದಲ್ಲಿ ಅವರದ್ದು ವಿಶೇಷ ಛಾಪು. ಅವರಲ್ಲಿದ್ದ ಅಶ್ವಗಳನ್ನು ಪಳಗಿಸುವ ಕಲೆ ಅನನ್ಯವಾದದ್ದು. ಅವರ ಮಾರ್ಗದರ್ಶನದಲ್ಲಿ ಹಲವರು ಟ್ರೇನರ್ಗಳಾಗಿ ರೂಪುಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.