ಬೆಂಗಳೂರು: ಸುಲ್ತಾನ್ ಜೊಹರ್ ಕಪ್ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ಜೂನಿಯರ್ ತಂಡವನ್ನು ಉತ್ತಮ್ ಸಿಂಗ್ ಮುನ್ನಡೆಸಲಿದ್ದಾರೆ.

ಅ.27 ರಿಂದ ನ.4ರ ವರೆಗೆ ಮಲೇಷ್ಯಾದಲ್ಲಿ ನಡೆಯಲಿರುವ ಟೂರ್ನಿಗೆ 20 ಸದಸ್ಯರ ಭಾರತ ತಂಡವನ್ನು, ಹಾಕಿ ಇಂಡಿಯಾ (ಎಚ್ಐ) ಸೋಮವಾರ ಪ್ರಕಟಿಸಿತು. 11ನೇ ಅವೃತ್ತಿಯ ಟೂರ್ನಿಯಲ್ಲಿ ಎಂಟು ತಂಡಗಳು ಪಾಲ್ಗೊಳ್ಳಲಿವೆ. ಈ ಹಿಂದಿನ ಟೂರ್ನಿಗಳಲ್ಲಿ ಆರು ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.

ಭಾರತ ತಂಡವು ಮಲೇಷ್ಯಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳ ಜತೆ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜರ್ಮನಿ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್ ತಂಡಗಳು ‘ಬಿ’ ಗುಂಪಿನಲ್ಲಿವೆ.

ತಂಡ ಹೀಗಿದೆ

ಗೋಲ್ಕೀಪರ್ಸ್: ಮೋಹಿತ್ ಎಚ್.ಎಸ್., ರಣವಿಜಯ್ ಸಿಂಗ್ ಯಾದವ್

ಡಿಫೆಂಡರ್ಸ್: ಅಮನ್ದೀಪ್ ಲಾಕ್ರ, ರೋಹಿತ್, ಸುನಿಲ್ ಜೊಜೊ, ಸುಖ್ವಿಂದರ್, ಅಮೀರ್ ಅಲಿ, ಯೋಗಂಬರ್ ರಾವತ್

ಮಿಡ್ಫೀಲ್ಡರ್ಸ್: ವಿಷ್ಣುಕಾಂತ್ ಸಿಂಗ್, ಪೂವಣ್ಣ ಸಿ.ಬಿ., ರಾಜೀಂದರ್ ಸಿಂಗ್, ಅಮನ್ದೀಪ್, ಸುನಿತ್ ಲಾಕ್ರ, ಅಬ್ದುಲ್ ಅಹದ್

ಫಾರ್ವರ್ಡ್ಸ್: ಉತ್ತಮ್ ಸಿಂಗ್, ಅರುಣ್ ಸಹಾನಿ, ಆದಿತ್ಯ, ಅಂಗದ್ ಬೀರ್ ಸಿಂಗ್, ಗುರುಜ್ಯೋತ್ ಸಿಂಗ್, ಸತೀಶ್ ಬಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.