ನವದೆಹಲಿ: ಒಲಿಂಪಿಕ್ಸ್‌ಗೆ ಸುಮಾರು ಏಳು ತಿಂಗಳುಗಳಿರುವಂತೆ ಭಾರತ ಹಾಕಿ ತಂಡಕ್ಕೆ ಆಟಗಾರರನ್ನು ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಉತ್ತಮ ಆಟಗಾರರನ್ನು ಆರಿಸಿಕೊಳ್ಳುವ ಉದ್ದೇಶದಿಂದ, ನಾಲ್ಕು ರಾಷ್ಟ್ರಗಳ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತವು 26 ಆಟಗಾರರ ದೊಡ್ಡ ತಂಡವನ್ನು ಕಳುಹಿಸಲಿದೆ.

ಕೇಪ್‌ಟೌನ್‌ನಲ್ಲಿ ಜನವರಿ 22ರಿಂದ ಟೂರ್ನಿ ನಡೆಯಲಿದೆ. ಫ್ರಾನ್ಸ್, ನೆದರ್ಲೆಂಡ್ಸ್ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾ ಟೂರ್ನಿಯಲ್ಲಿ ಭಾಗವಹಿಸುವ ಇತರ ರಾಷ್ಟ್ರಗಳು.

ಮಾಜಿ ನಾಯಕ ಮನ್‌ಪ್ರೀತ್ ಸಿಂಗ್ ವಿರಾಮದ ನಂತರ ತಂಡಕ್ಕೆ ಮರಳಿದ್ದಾರೆ. ಹರ್ಮನ್‌ಪ್ರೀತ್ ಸಿಂಗ್ ತಂಡದ ನಾಯಕರಾಗಿದ್ದಾರೆ. ಎಫ್‌ಐಎಚ್ ವರ್ಷದ ಆಟಗಾರ ಹಾರ್ದಿಕ್ ಸಿಂಗ್ ಉಪನಾಯಕರಾಗಿದ್ದಾರೆ.

‘ಒಲಿಂಪಿಕ್ ವರ್ಷದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಋತುವನ್ನು ಆರಂಭಿಸಲು ಕಾತರದಿಂದ ಇದ್ದೇವೆ. ಈ ಪ್ರವಾಸದಲ್ಲಿ ಗುಣಮಟ್ಟದ ತಂಡಗಳ ಎದುರು ಆಡುತ್ತಿದ್ದೇವೆ’ ಎಂದು ಭಾರತ ತಂಡದ ಚೀಫ್ ಕೋಚ್ ಕ್ರೇಗ್ ಫುಲ್ಡನ್ ಹೇಳಿದರು.

‘ಆಟಗಾರರಿಗೆ ಅನುಭವ ಸಿಗಲೆಂಬ ದೃಷ್ಟಿಯಿಂದ ದೊಡ್ಡ ತಂಡವನ್ನು ಆಯ್ಕೆಮಾಡಿದ್ದೇವೆ. ಪ್ರೊ ಲೀಗ್‌ಗೆ ಮೊದಲು ಕೆಲವು ಆಟಗಾರರನ್ನು ಸ್ಪರ್ಧಾತ್ಮಕ ಮನೋಸ್ಥಿತಿಗೆ ತರಲು ಈ ಪ್ರವಾಸ ಅವಕಾಶವಾಗಲಿದೆ’ ಎಂದರು.

ಭಾರತ ಜೂನಿಯರ್ ತಂಡದಲ್ಲಿ ಸ್ಫೂರ್ತಿಯುತ ಪ್ರದರ್ಶನ ನೀಡಿರುವ ಅರಿಜೀತ್ ಸಿಂಗ್ ಹುಂಡಲ್ ಮತ್ತು ಬಾಬಿ ಸಿಂಗ್ ಧಾಮಿ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಪ್ರವಾಸಕ್ಕೆ ತೆರಳುವ ಮೊದಲು ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದ ಕೇಂದ್ರದಲ್ಲಿ ಅಲ್ಪಾವಧಿಯ ಶಿಬಿರ ನಡೆಯಲಿದೆ.

ತಂಡ ಹೀಗಿದೆ:

ಗೋಲ್ ಕೀಪರ್ಸ್: ಪಿ.ಆರ್.ಶ್ರೀಜೇಶ್, ಕ್ರಿಶನ್ ಬಹಾದ್ದೂರ್ ಪಾಠಕ್, ಪವನ್.

ಡಿಫೆಂಡರ್ಸ್: ಜರ್ಮನ್‌ಪ್ರೀತ್ ಸಿಂಗ್, ಜುಗರಾಜ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ಸುಮಿತ್, ಸಂಜಯ್, ರಬಿಚಂದ್ರ ಸಿಂಗ್ ಮೊಯಿರಂಗ್ಧೆಮ್.

ಮಿಡ್‌ಫೀಲ್ಡರ್ಸ್: ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮ, ರಾಜಕುಮಾರ್ ಪಾಲ್, ಶಂಷೇರ್ ಸಿಂಗ್, ವಿಷ್ಣುಕಾಂತ್ ಸಿಂಗ್, ಹಾರ್ದಿಕ್ ಸಿಂಗ್, ಮನ್‌ಪ್ರೀತ್ ಸಿಂಗ್. ಫಾರ್ವರ್ಡ್ಸ್: ಮನದೀಪ್ ಸಿಂಗ್, ಅಭಿಷೇಕ್, ಸುಖಜೀತ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಅಕ್ಷದೀಪ್ ಸಿಂಗ್, ಅರಿಜೀತ್ ಸಿಂಗ್ ಹುಂಡಲ್, ಬಾಬಿ ಸಿಂಗ್ ಧಾಮಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.