ನವದೆಹಲಿ: ಬೇರು ಮಟ್ಟದಲ್ಲಿ ಹಾಕಿ ಆಟಕ್ಕೆ ಹೆಚ್ಚಿನ ಉತ್ತೇಜನ ನೀಡುವ ಕ್ರಮವಾಗಿ ಹಾಕಿ ಇಂಡಿಯಾ, ಸುಮಾರು ಎಂಟು ಕೋಟಿ ಮೌಲ್ಯದ ಹಾಕಿ ಆಟದ ಪರಿಕರಗಳನ್ನು ರಾಜ್ಯ ಸಂಸ್ಥೆಗಳಿಗೆ, ಸದಸ್ಯ ಘಟಕಗಳಿಗೆ, ವಿವಿಧ ಆಕಾಡೆಮಿಗಳಿಗೆ ಹಂಚಿಕೆ ಮಾಡಿದೆ.

11,000 ಹಾಕಿ ಸ್ಟಿಕ್, 3,300 ಚೆಂಡುಗಳು ಮತ್ತು ಸುರಕ್ಷತಾ ಸಾಧನಗಳು ಇವುಗಳಲ್ಲಿ ಒಳಗೊಂಡಿವೆ. ‘ಹಾಕಿ ಇಂಡಿಯಾ ಕಾ ಅಭಿಯಾನ್ ಹರ್ ಘರ್ ಹೊ ಹಾಕಿ ಕಿ ಪೆಹಚಾನ್’ (ಹಾಕಿ ಇಂಡಿಯಾದ ಅಭಿಯಾನ, ಪ್ರತಿ ಮನೆಯಲ್ಲಾಗಲಿ ಹಾಕಿಯ ಪರಿಚಯ) ಎಂಬ ಕಾರ್ಯಕ್ರಮದಡಿ ಪರಿಕರಗಳನ್ನು ವಿತರಿಸಲಾಗಿದೆ. ಅವಕಾಶವಂಚಿತ ಮಕ್ಕಳಿಗೂ ಹಾಕಿ ಆಟ ತಲುಪಲಿ ಎಂಬ ಆಶಯವನ್ನೂ ಹೊಂದಲಾಗಿದೆ.

ರಾಜ್ಯ ಸಂಸ್ಥೆಗಳ ಜೊತೆ ರೌಂಡ್‌ಗ್ಲಾಸ್ ಪಂಜಾಬ್ ಹಾಕಿ ಕ್ಲಬ್, ಧ್ಯಾನ್ ಚಂದ್ ಹಾಕಿ ಅಕಾಡೆಮಿ, ರಿಪಬ್ಲಿಕನ್ ಸ್ಪೋರ್ಟ್ಸ್ ಕ್ಲಬ್, ಜಮ್ಷೆಡ್‌ಪುರದ ನವಲ್ ಟಾಟಾ ಹಾಕಿ ಅಕಾಡೆಮಿ ಸೇರಿದಂತೆ ವಿವಿಧ ಕ್ಲಬ್‌ಗಳು ಇದರ ಲಾಭ ಪಡೆದಿವೆ.

ಭಾರತದಲ್ಲಿ ಹಾಕಿ ಆಟದ ಅಭಿವೃದ್ಧಿಗೆ ಭದ್ರ ತಳಪಾಯ ಒದಗಿಸಬೇಕೆಂಬ ನಮ್ಮ ಯೋಜನೆಗೆ ಈ ಅಭಿಯಾನ ಪೂರಕವಾಗಿದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.