ಕೈರೊ: ಜಿದ್ದಾಜಿದ್ದಿನ ಹೋರಾಟದಲ್ಲಿ ಗೆದ್ದ ಭಾರತದ ಜೋಷ್ನಾ ಚಿಣ್ಣಪ್ಪ ಅವರು ಈಜಿಪ್ಟ್ ಓಪನ್ ಸ್ಕ್ವಾಷ್ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದಾರೆ. ಇಲ್ಲಿಬುಧವಾರ ನಡೆದ ಪಂದ್ಯದಲ್ಲಿ ಅವರು 11–7, 11–6, 7–11, 10–12, 11–9ರಿಂದ ಈಜಿಪ್ಟ್‌ನ ಫರೀದಾ ಮೊಹಮ್ಮದ್ ಅವರನ್ನು ಸೋಲಿಸಿದರು.

ಭಾರತದ ಅಗ್ರ ಶ್ರೇಯಾಂಕದ ಆಟಗಾರ ಸೌರವ್ ಘೋಷಾಲ್ ಅವರು ಮೂರನೇ ಸುತ್ತಿನ ಹಣಾಹಣಿಯಲ್ಲಿ 8–11, 9–11, 8–11ರಿಂದ ಸ್ಥಳೀಯ ಆಟಗಾರ ಮೆಜನ್ ಹಶೇಮ್ ಅವರಿಗೆ ಮಣಿದರು.

ಕೋವಿಡ್–19 ಪಿಡುಗಿನ ಹಿನ್ನೆಲೆಯಲ್ಲಿ ಆರು ತಿಂಗಳ ಬಳಿಕ ಕಣಕ್ಕಿಳಿದಿದ್ದ ಜೋಷ್ನಾ, ಪಂದ್ಯದಲ್ಲಿ ಫರೀದಾ ಅವರಿಂದ ತೀವ್ರ ಪೈಪೋಟಿ ಎದುರಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿ, ಮೊದಲ ಎರಡು ಗೇಮ್‌ಗಳನ್ನು ತನ್ನದಾಗಿಸಿಕೊಂಡಿದ್ದರು. ಮೂರು, ನಾಲ್ಕನೇ ಗೇಮ್ ಗೆದ್ದುಕೊಂಡ 38ನೇ ಕ್ರಮಾಂಕದ ಫರೀದಾ ಭರ್ಜರಿ ತಿರುಗೇಟು ನೀಡಿದರು.

ಆದರೆ ಐದನೇ ಹಾಗೂ ನಿರ್ಣಾಯಕ ಗೇಮ್ ವಶಪಡಿಸಿಕೊಂಡ ಜೋಷ್ನಾ ಜಯದ ನಿಟ್ಟುಸಿರು ಬಿಟ್ಟರು.

ಎಂಟರಘಟ್ಟದ ಪಂದ್ಯದಲ್ಲಿ ಜೋಷ್ನಾ ಅವರಿಗೆ ಕಠಿಣ ಸವಾಲು ಎದುರಾಗಿದೆ. ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿರುವ ಈಜಿಪ್ಟ್‌ನ ನೂರ್ ಎಲ್ ಶೆರ್ಬಿನಿ ಅವರಿಗೆ ಮುಖಾಮುಖಿಯಾಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.