ಪ್ಯಾರಿಸ್ : ಅಮೆರಿಕದ ಮಸಾಯ್ ರಸೆಲ್ ಅವರು ಫೋಟೊ ಫಿನಿಷ್ ಮುಕ್ತಾಯ ಕಂಡ ಮಹಿಳೆಯರ 100 ಮೀಟರ್ಸ್ ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದರು.

ಶನಿವಾರ ನಡೆದ ಈ ರೋಚಕ ಸ್ಪರ್ಧೆಯಲ್ಲಿ ಮಸಾಯ್ 12.33 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಆತಿಥೇಯ ಫ್ರಾನ್ಸ್‌ನ ಸೈರಿನಾ ಸಾಂಬಾ ಮಯೆಲಾ 0.01ಸೆಕೆಂಡು ಅಂತರದಲ್ಲಿ ಗುರಿ ಮುಟ್ಟಿದರು. ಅವರು ಬೆಳ್ಳಿ ಪದಕ ಪಡೆದರು. ಇದು ಆತಿಥೇಯ ದೇಶಕ್ಕೆ ಅಥ್ಲೆಟಿಕ್ಸ್‌ನಲ್ಲಿ ಒಲಿದ ಮೊದಲ ಪದಕವಾಗಿದೆ.

ಪೋರ್ಟೊರಿಕೊದ ಜಾಸ್ಮಿನ್ ಕ್ಯಾಮ್ಕೋ ಕ್ವಿನ್ ಅವರು (12.36 ಸೆ) ಕಂಚು ಗಳಿಸಿದರು.

ಅತ್ಯಂತ ನಿಕಟ ಸ್ಪರ್ಧೆಯಾಗಿದ್ದರಿಂದ ಮೊದಲ ಮೂರು ಸ್ಥಾನಗಳ ವೇಳೆಯನ್ನು ಪರಿಶೀಲಿಸಲು ನಿರ್ಣಾಯಕರು ತುಸು ಸಮಯ ತೆಗೆದುಕೊಂಡರು. ನಂತರ ಫಲಿತಾಂಶ ಪ್ರಕಟಿಸಿದರು.

ಇಮ್ಯಾನುವೆಲ್‌ಗೆ ಚಿನ್ನ

ಕೆನ್ಯಾದ 20 ವರ್ಷದ ಇಮ್ಯಾನುವೆಲ್ ವಾನೊನಿ ಪುರುಷರ 800 ಮೀಟರ್ ಓಟದಲ್ಲಿ ಚಿನ್ನದ ಪದಕ ಜಯಿಸಿದರು. ಅವರು ಈ ಪೈಪೋಟಿಯಲ್ಲಿ ವಿಶ್ವ ಚಾಂಪಿಯನ್ ಆಗಿರುವ ಕೆನಡಾದ ಮಾರ್ಕೊ ಎರೊಪ್ ಅವರನ್ನು ಹಿಂದಿಕ್ಕಿದರು.

1 ನಿಮಿಷ, 41.19 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಇಮ್ಯಾನುವೆಲ್ ಪ್ರಥಮ ಸ್ಥಾನ ಗಳಿಸಿದರು. ಅತ್ಯಲ್ಪ ಅಂತರದಲ್ಲಿ ಎರಡನೇ ಸ್ಥಾನ ಗಳಿಸಿದ ಮಾರ್ಕೊ (1ನಿ,41.20ಸೆ) ಬೆಳ್ಳಿ ಪದಕ ಪಡೆದರು. ಅಲ್ಜೀರಿಯಾದ ಡಿಜೆಮೆಲ್ ಸೆಡ್ಜೇತಿ (1ನಿ, 41.50ಸೆ) ಕಂಚಿನ ಪದಕ ಗಳಿಸಿದರು.

69 ಸಾವಿರ ಪ್ರೇಕ್ಷಕರು ಸೇರಿದ್ದ ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ನಡೆದ ರೇಸ್‌ನ ಬಹುತೇಕ ಸಮಯ ಇಮ್ಯಾನುವೆಲ್ ಮತ್ತು ಮಾರ್ಕೊ ನಿಕಟ ಪೈಪೋಟಿ ನಡೆಸಿದರು.

ಕಿಪೆಗಾನ್ ಹ್ಯಾಟ್ರಿಕ್

ಮಧ್ಯಮ ಅಂತರದ ಓಟದ ದಂತಕಥೆ ಕೆನ್ಯಾದ ಫೇಥ್ ಕಿಪೆಗಾನ್ ಸತತ ಮೂರನೇ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 1500 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಗೆದ್ದರು. ಈ ಸಾಧನೆ ಮಾಡಿದ ಮೊದಲ ಅಥ್ಲೀಟ್ ಎಂಬ ದಾಖಲೆಯನ್ನೂ ನಿರ್ಮಿಸಿದರು.

3 ನಿಮಿಷ, 51.29 ಸೆಕೆಂಡುಗಳಲ್ಲಿ ಕಿಪೆಗಾನ್ ಅವರು ಗುರಿ ಮುಟ್ಟಿದರು. ಇದು ಒಲಿಂಪಿಕ್ ಕೂಟ ದಾಖಲೆಯಾಗಿದೆ. ಆಸ್ಟ್ರೇಲಿಯಾದ ಜೆಸಿಕಾ ಹಲ್ (3ನಿ,52.56ಸೆ) ಮತ್ತು ಬ್ರಿಟನ್‌ನ ಜಾರ್ಜಿಯಾ ಬೆಲ್ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದರು.

ಜೇಕಬ್ ಜಯಭೇರಿ

ನಾರ್ವೆಯ ಜೇಕಬ್ ಇಂಜೆಬ್ರೈಟ್‌ಸೆನ್ ಅವರು 5000 ಮೀ ಇಥಿಯೋಪಿಯಾ ಓಟಗಾರರ ಪೈಪೋಟಿಯನ್ನು ಮೀರಿ ನಿಂತು ಬಂಗಾರ ಪದಕ ಗಳಿಸಿದರು.

ವಿಶ್ವ ಚಾಂಪಿಯನ್ ಆಗಿರುವ ಜೇಕಬ್ 13 ನಿಮಿಷ, 13.66 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಕೆನ್ಯಾದ ರೋನಾಲ್ಡ್ ಕೆವಿಮೊಯ್ (13ನಿ, 5.04ಸೆ) ಬೆಳ್ಳಿ ಮತ್ತು ಅಮೆರಿಕದ ಗ್ರ್ಯಾಂಟ್ ಫಿಷರ್ (13ನಿ,15.13ಸೆ) ಕಂಚಿನ ಪದಕ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.